ಯತ್ನಾಳ್ ವಿರುದ್ಧ ನಾಲಿಗೆ ಹರಿಬಿಟ್ಟ ಮುಸ್ಲಿಂ ಯುವಕನ ಬಂಧನ
ಕೊಪ್ಪಳ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ವೀಡಿಯೋ ಮಾಡಿದ್ದ ಮುಸ್ಲಿಂ ಯುವಕನನ್ನು ಪೊಲೀಸರರು ಬಂಧಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕನಕಗಿರಿ ಪೊಲೀಸರು ಹುಸೇನಿ ಎಂಬಾತನನ್ನು ಬಂಧಿಸಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಅಲ್ಲದೇ ಯತ್ನಾಳ್ ಬೆಂಬಲಿಗರು ಗ್ರಾಮಕ್ಕೆ ದೌಡಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಯುವಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಯುವಕನನ್ನು ಬಂಧಿಸಲಾಗಿದೆ.
ವೀಡಿಯೋದಲ್ಲಿ ಏನಿತ್ತು…? ಶಾಸಕ ಯತ್ನಾಳ್ ಅಧಿವೇಶನದಲ್ಲಿ ಆಜಾನ್ ಕುರಿತಾಗಿ ಪ್ರಸ್ತಾಪಿಸಿದ್ದ ವಿಚಾರವಾಗಿ ವಿಡಿಯೋ ಹರಿಬಿಟ್ಟಿದ್ದ ಹುಸೇನಿ, ‘ನೀನು ಬೂಟು ನೆಕ್ಕಿದ ವಂಶಸ್ಥ’ ಎಂದು ನಾಲಿಗೆ ಹರಿಬಿಟ್ಟಿದ್ದ.
ಈ ವಿಡಿಯೋ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಮುಸಲಾಪುರ ಗ್ರಾಮದಲ್ಲಿ ಜಮಾವಣೆಗೊಂಡಿದ್ದ ಯತ್ನಾಳ್ ಬೆಂಬಲಿಗರು ಕ್ರಮಕ್ಕೆ ಒತ್ತಾಯಿಸಿದ್ದರು. ಬಳಿಕ ಹುಸೇನಿ ಕ್ಷಮೆ ಕೂಡ ಕೇಳಿದ್ದಾನೆ.


