ಉಚ್ಚಾಟನೆ ಭೀತಿಯಲ್ಲಿ ಯತ್ನಾಳ್ ; ಬೆಳಗಾವಿಯಲ್ಲಿ ಹೇಳಿದ್ದೇನು…?
ಬೆಳಗಾವಿ : ವಕ್ಫ್ ಕಾಯ್ದೆ ವಿರೋಧಿಸಿ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಹೋರಾಟ ನಡೆಸುತ್ತಿರುವ ಬಿಜೆಪಿ ಅತೃಪ್ತ ತಂಡಕ್ಕೆ ಸಧ್ಯ ಉಚ್ಚಾಟನೆ ಭೀತಿ ಎದುರಾಗಿದೆ. ಈಗಾಗಲೇ ದೆಹಲಿಗೆ ಬರುವಂತೆ ಯತ್ನಾಳ್ ಗೆ ಹೈಕಮಾಂಡ್ ಬುಲಾವ್ ನೀಡಿದೆ.
ಭಾನುವಾರ ಬೆಳಗಾವಿ ನಗರದಲ್ಲಿ ವಕ್ಫ್ ಅವಾಂತರ ವಿರೋಧಿಸಿ ಯತ್ನಾಳ್ ನೇತೃತ್ವದ ಬಂಡಾಯ ತಂಡ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ವಿಜಯೇಂದ್ರ ವಿರುದ್ಧ ಹರಿಹಾಯ್ದಿದ್ದಾರೆ.
ತಮ್ಮನ್ನು ಹೈಕಮಾಂಡ್ ಉಚ್ಚಾಟನೆ ಮಾಡುವ ವಿಚಾರವಾಗಿ ಮಾತನಾಡಿದ ಇವರು. ಕೆಲವರು ಹೇಳಿದ ಮಾತ್ರಕ್ಕೆ ಇದು ಆಗುವುದಿಲ್ಲ. ಹೈಕಮಾಂಡ್ ದೆಹಲಿಗೆ ಕರೆದಿದೆ. ನಾವು ಹೋಗಿ ಮಾತನಾಡುತ್ತೇವೆ ಎಂದಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ನಾಯಕರು ದೆಹಲಿಗೆ ಬರುತ್ತಿದ್ದಾರೆ. ನಾವು ಬೇರೆ ವಿಮಾನಗಳ ಮೂಲಕ ತೆರಳುತ್ತೇವೆ. ಅಲ್ಲಿಯೂ ಬೇರೆ, ಬೇರೆ ಹೊಟೆಲ್ ಗಳಲ್ಲಿ ಉಳಿದುಕೊಳ್ಳುತ್ತೇವೆ. ಮತ್ತೆ ನಮ್ಮ ಮಧ್ಯೆ ಒಡಕು ಎಂದು ಭಾವಿಸಬೇಡಿ ಎಂದು ಯತ್ನಾಳ್ ಹೇಳಿದರು.
ಇನ್ನೂ ವಿಜಯೇಂದ್ರ ಬಣದ ಶಾಸಕರು, ಮಾಜಿ ಶಾಸಕರು ಸೇರಿದಂತೆ ಅನೇಕ ಮುಖಂಡರು ಇಂದು ಬೆಳಿಗ್ಗೆ ಯಡಿಯೂರಪ್ಪ ನಿವಾಸಕ್ಕೆ ಭೇಟಿನೀಡಿ ಮಾತುಕತೆ ನಡೆಸಿದ್ದಾರೆ. ಬಿಜೆಪಿ ವಿರುದ್ಧ ಯತ್ನಾಳ್ ನಾಲಿಗೆ ಹರಿಬಿಡುತ್ತಿರುವ ಹಿನ್ನಲೆಯಲ್ಲಿ ಪಕ್ಷಕ್ಕೆ ಮುಜುಗರ ಆಗುತ್ತಿದ್ದು ಯತ್ನಾಳ್ ಉಚ್ಚಾಟನೆಗೆ ಆಗ್ರಹಿಸಿದ್ದಾರೆ.
ಯತ್ನಾಳ್ ಗೆ ಕೇಂದ್ರ ಶಿಸ್ತುಸಮಿತಿಯಿಂದ್ ಶೋಕಾಸ್ ನೋಟಿಸ್..! ಬಾಯಿಗೆ ಬೀಳುತ್ತಾ ಬೀಗ..?

ಬೆಳಗಾವಿ : ಮಾಜಿ ಕೇಂದ್ರ ಸಚಿವ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬಿಜೆಪಿ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದ್ದು ಇದಕ್ಕೆ ಯತ್ನಾಳ್ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕುತೂಹಲ ಮೂಡಿಸಿದೆ.
ಹೌದು ನಿರಂತರವಾಗಿ ಬಿಜೆಪಿಯ ಕೆಲ ಹಿರಿಯ ನಾಯಕರ ವಿರುದ್ಧ ನಾಲಿಗೆ ಹರಿಬಿಡುತ್ತಿರುವ ಯತ್ನಾಳ್ ಉಚ್ಚಾಟನೆಗೆ ರಾಜ್ಯದ ಅನೇಕ ನಾಯಕರು ಆಗ್ರಹಿಸಿದ್ದರು. ಈ ಕುರಿತು ಸ್ವತಃ ವಿಜಯೇಂದ್ರ ಕೇಂದ್ರದ ಹೈಕಮಾಂಡ್ ಭೇಟಿಮಾಡಿ ಯತ್ನಾಳ್ ವಿರುದ್ಧ ಆರೋಪ ಮಾಡಿದ್ದರು. ಸಧ್ಯ ಶಿಸ್ತು ಸಮಿತಿ ನೋಟಿಸ್ ನೀಡಿದೆ.
ಕೇಂದ್ರ ಕೊಟ್ಟ ಶೋಕಾಸ್ ನೋಟಿಸ್ ನಲ್ಲಿ ಮಹತ್ವದ ವಿಷಯ ಉಲ್ಲೇಖ ಮಾಡಲಾಗಿದೆ. ಬಿಜೆಪಿ ರಾಜ್ಯ ನಾಯಕತ್ವದ ವಿರುದ್ಧ ಪಕ್ಷ ವಿರೋಧಿ ಹೇಳಿಕೆ ನೀಡುತ್ತಿದ್ದೀರಿ. ರಾಜ್ಯ ಬಿಜೆಪಿ ತಗೆದುಕೊಂಡ ಎಲ್ಲಾ ನಿರ್ಧಾರಗಳು ವಿರುದ್ಧ ನಿಮ್ಮ ನಿಲುವು ಇರುತ್ತಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ.
ಈ ಮೊದಲು ತಮಗೆ ಶೋಕಾಸ್ ನೋಟಿಸ್ ಕೊಡಲಾಗಿದ್ದರು ಕೂಡಾ ಮತ್ತೆ ವಾಗ್ದಾಳಿ ನಡೆಸುತ್ತಿರುವುದು ಕಳವಳಕಾರಿ. ನೀವು ಬಿಜೆಪಿ ಪಕ್ಷದ ಒಬ್ಬ ಹಿರಿಯ ನಾಯಕಾರಿ ಈ ಹಿಂದೆ ನೀಡಿದ್ದ ಸ್ಪಷ್ಟೀಕರಣರಣ ಕಾಣರಕ್ಕೆ ಪಕ್ಷ ತಾತ್ವಿಕ ನಿಲುವು ತಗೆದುಕೊಂಡಿತ್ತು.
ನೀವು ಮಾಡುತ್ತಿರುವ ವಾಗ್ದಾಳಿ ಹಾಗೂ ಪಕ್ಷ ವಿರೋಧಿ ಹೇಳಿಕೆಗಳು ಹಾಗೂ ಪಕ್ಷ ವಿರೋಧಿ ಚಟುವಟಿಕೆಗಳು ಇದು ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದಂತಾಗಿದೆ. ಈ ಕುರಿತು 10 ದಿನಗಳಲ್ಲಿ ಉತ್ತರ ನೀಡಬೇಕು. ಇಲ್ಲವಾದರೆ ಪಕ್ಷ ತಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದೆ.
“ಈ ಕುರಿತು ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಬಸನಗೌಡ ಪಾಟೀಲ್ ಯತ್ನಾಳ್. ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷರು ನೀಡಿರುವ ನೋಟಿಸ್ಗೆ ಉತ್ತರ ನೀಡುತ್ತೇನೆ, ಕರ್ನಾಟಕದಲ್ಲಿ ಬಿಜೆಪಿಯ ಪ್ರಸ್ತುತ ಸ್ಥಿತಿಯ ಬಗ್ಗೆ ವಾಸ್ತವಾಂಶವನ್ನು ಪ್ರಸ್ತುತಪಡಿಸುತ್ತೇನೆ. ಹಿಂದುತ್ವದ ಹೋರಾಟ, ಭ್ರಷ್ಟಾಚಾರದ ವಿರೋಧ, ವಕ್ಫ್ ಸಂಬಂಧಿತ ಸಮಸ್ಯೆಗಳು ಮತ್ತು ಹೊಂದಾಣಿಕೆ ಇಲ್ಲದ ರಾಜಕೀಯಕ್ಕೆ ನನ್ನ ಬದ್ಧತೆ ಅಚಲವಾಗಿ ಉಳಿಯುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.”


