ನಾನು ಸಿಎಂ ಆದರೆ ಪೊಲೀಸರ ಕೈಗೆ AK-47 ಕೊಡುವೆ : ಅಬ್ಬರಿಸಿದ ಯತ್ನಾಳ್
ಬೈಲಹೊಂಗಲ : ನಾನು ಮುಖ್ಯಮಂತ್ರಿ ಆದರೆ ಎಲ್ಲ ಪೊಲೀಸರ ಕೈಯಲ್ಲಿ ಎಕೆ47 ಕೊಡುತ್ತೇನೆ. ದೇಶ ವಿರೋದಿ ಚಟುವಟಿಕೆ ಮಾಡುವವರಿಗೆ ಅವರು ಮಾತನಾಡುವ ಮೊದಲು ಗುಂಡು ಹೊಡೆಯಲಾಗುವುದು. ಎಲ್ಲರು ಜಾತಿ ಬಿಟ್ಟು ಒಂದಾಗಿ ಹಿಂದೂ ಸಮಾಜ ಕಟ್ಟಿರಿ. ಬರುವಂತ ದಿನಮಾನಗಳಲ್ಲಿ ದೇಶದಲ್ಲಿ ಯೋಗಿ, ರಾಜ್ಯದಲ್ಲಿ ನಾವು’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದರು.
ಪಟ್ಟಣದ ವೀರರಾಣ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳದ ಜೋಡು ರಸ್ತೆಯಲ್ಲಿ ಹಿಂದೂ ಮಹಾಗಣಪತಿ ಉತ್ಸವ ಸಮಿತಿ ವತಿಯಿಂದ ಶುಕ್ರವಾರ ನಡೆದ ಎರಡನೇ ವರ್ಷದ ಹಿಂದೂ ಮಹಾಗಣಪತಿ ವಿಸರ್ಜನೆ ಹಾಗೂ ಬೃಹತ್ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತದಲ್ಲಿ ಹಿಂದೂಗಳು ಸುರಕ್ಷಿತವಾಗಿ ಜೀವನ ಸಾಗಿಸಬೇಕಾದರೆ ನಾವೆಲ್ಲರೂ ಒಂದಾಗಿ ಬಲಿಷ್ಠರಾಗಬೇಕಿದೆ. ಲೋಕ ಮಾನ್ಯ ತೀಲಕರು ಗಣೇಶ ಉತ್ಸವವನ್ನು ಮೊದಲು ಗಣಪತಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಿದ್ದರು. ಹಿಂದೂಗಳನ್ನು ಒಗ್ಗಟ್ಟಿಸಲು ಸಾರ್ವಜನಿಕ ಗಣೇಶ ಉತ್ಸವವನ್ನಾಗಿ ಆಚರಿಸಿದ್ದಾರೆ. ಅದನ್ನು ನಾವೆಲ್ಲರೂ ಒಂದಾಗಿ ಮುಂದುವರೆಸಿಕೊಂಡು ಹೋಗಬೇಕಿದೆ ಎಂದರು.
ವಿದೇಶದಲ್ಲಿ ಕುಳಿತು ಅರೆ ಹುಚ್ಚ ರಾವುಲ್ ಗಾಂದಿ ಭಾರತ ದೇಶ, ದೇಶವೇ ಅಲ್ಲ ಅಂತ ಮಾತನಾಡುತ್ತಾರೆ. ಅವನನ್ನು ಪ್ರಧಾನಮಂತ್ರಿ ಮಾಡಿದರೆ ಭಾರತೀಯರ ಗತಿ ಏನು’ ಎಂದು ಕಿಡಿ ಕಾರಿದರು. ನರೇಂದ್ರ ಮೋದಿ ದೇಶದ ಪ್ರಧಾನಮಂತ್ರಿ ಆಗದೇ ಹೋಗಿದ್ದರೆ ನಾವು ಹಿಂದೂಗಳ ಅತ್ಯಂತ ಕ್ಲಿಷ್ಕರ ಪರಿಸ್ಥಿತಿಯಲ್ಲಿ ಇರುತ್ತಿದ್ದವು.
ರಾಜ್ಯದಲ್ಲಿನ ನಾಗಮಂಗಲ ಗಣೇಶ ಉತ್ಸವದಲ್ಲಿ ಪೆಟ್ರೋಲ್ ಬಾಂಬ್ ಹಾಕಿದರು. ಕಲ್ಲು ಒಗಿದವರು ಅವರು, ಕೇಸು ನಮ್ಮ ಹಿಂದೂಗಳ ಮೇಲೆ ಹಾಕಿದ್ದಾರೆ. ತಿರುಪತಿಯಲ್ಲಿ ಜಗನಮೋಹನರೆಡ್ಡಿ ಅವರ ಅಧಿಕಾರ ಅವಧಿಯಲ್ಲಿ ಲಡ್ಡೂ ಪ್ರಸದಾದಲ್ಲಿ ಧನದ ಕೊಬ್ಬು, ಮೀನಿನ ಎಣ್ಣೆ ಹಾಕಿ ಹಿಂದೂ ಧರ್ಮದ ಪಾವಿತ್ರತೆಗೆ ಧಕ್ಕೆ ತಂದಿದ್ದಾರೆ. ರಾಜ್ಯದಲ್ಲಿ ಕಳದೆ ಚುನಾವಣೆಯಲ್ಲಿ ಲಕ್ಷ್ಮೀ ಅಕ್ಕಾನ 2000 ರೂ. ಆಸೆ ಪಟ್ಟು ಮತ ಚಲಾಯಿಸಿದ್ದೀರಿ. ಅದರ ಪ್ರತಿಫಲ ಇಂದು ಅನುಭವಿಸುವಂತಾಗಿದೆ’ ಎಂದರು.
ಕೇರಳದಲ್ಲಿ ಹಿಂದೂಗಳು ಅಲ್ಪ ಸಂಖ್ಯಾತರಾಗಿ ಜೀವನ ನಡೆಸಲು ದುಸ್ಥರವಾಗಿದೆ. ಬಾಂಗ್ಲ ದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆದಾಗ ಮಹಿಳೆಯರು ಪ್ರತಿಭಟಿಸಿ ತಲ್ವಾರ ಹಿಡಿದುಕೊಂಡು ಪ್ರತಿಭಟಿಸಿದಾಗ ಶಾಂತವಾಗಿದೆ. ಆ ದೇಶದ ಪ್ರಧಾನಮಂತ್ರಿ ಓಡಿ ಬಂದು ಭಾರತ ದೇಶದಲ್ಲಿ ಆಶ್ರಯ ಪಡೆದರು. ಅವರು ಮುಸ್ಲಿಂ ರಾಷ್ಟ್ರಕ್ಕೆ ಹೋಗಲಿಲ್ಲ. ಭಾರತಕ್ಕೆ ಆಶ್ರಯಕ್ಕೆ ಬಂದರು. ಭಾರತದಲ್ಲಿರುವ ನಾವು ಹಿಂದೂಗಳು ಜಾತಿ, ಜಾತಿ ಅಂತ ಬಡಿದಾಡುತ್ತಿದ್ದೇವೆ’ ಎಂದರು.
ಸಿದ್ದರಾಮಯ್ಯ ಸರ್ಕಾರ ಸಾಬರ ಸರ್ಕಾರವಾಗಿದೆ. ದೇಶದಲ್ಲಿ ಗಣೇಶ ಉತ್ಸವಗಳಿಗೆ ಅನುಮತಿ ಪಡೆಯಬೇಕು. ಮುಸ್ಲಿಂ ಹಬ್ಬಗಳಿಗೆ ಯಾವುದೇ ಅನುಮತಿ ಪಡೆಯಬೇಕಾಗಿಲ್ಲ. ರಾಜ್ಯದಲ್ಲಿ ನಮ್ಮ ಬಿಜೆಪಿ ಸರ್ಕಾರ ಬಂದರೆ ಹಿಂದೂ ಹಬ್ಬಗಳ ಆಚರಣೆಗೆ ಯಾವುದೇ ಅನುಮತಿ ಪಡೆಯಬೇಕಾಗಿಲ್ಲ. ವಿಜೃಂಭಣೆಯಿಂದ ಆಚರಿಸಿರಿ ಎಂದು ಕರೆ ನೀಡಿದರು.
ಹಿಂದೂಸ್ತಾನಮೇ ರೆಹನಾ ಹೈತೋ ಒಂದೇ ಮಾತರಂ ಕಹೆನಾಹೋಗಾ. ರಾಜ್ಯದಲ್ಲಿ ಹೊಸ ಯುಗ ಪ್ರಾರಂಭವಾಗಲಿದೆ. ಸಿದ್ದರಾಮಯ್ಯನವರು ಮೊದಲು ನಮ್ಮ ಹಿಂದು ದೇವಸ್ಥಾನಗಳಿಗೆ ಹೋಗುತ್ತಿರಲಿಲ್ಲ. ಹಣೆಗೆ ಕುಂಕುಮ ಹಚ್ಚುತ್ತಿರಲಿಲ್ಲ. ಈಗ ಏಕೆ ಹೋಗುತ್ತಿದ್ದೀರಿ’ ಎಂದು ವ್ಯಂಗ್ಯವಾಡಿದರು.
ಬೆಳ್ತಂಗಡಿ ಶಾಸಕ ಹರೀಶ ಪೊಂಜಾ ಮಾತನಾಡಿದರು. ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಉದ್ಯೆಮಿ ವಿಜಯ ಮೆಟಗುಡ್ಡ, ಶಂಕರ ಮಾಡಲಗಿ, ಅನೇಕರರು ಇದ್ದರು. ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಮುಖಂಡರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಚನ್ನಮ್ಮನ ಸಮಾಧಿ ಸ್ಥಳದಿಂದ ಆರಂಭವಾದ ಗಣೇಶ ವಿಸರ್ಜನೆಯ ಬೃಹತ್ ಶೋಭಾ ಯಾತೆಯಲ್ಲಿ ಡಿಜೆ ಸಂಗೀತ ನಾದಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಯುವಕರು ಕುಣ ದು ಕುಪ್ಪಳಿಸಿದರು. ಶೋಭಾಯಾತ್ರೆ ಉದ್ದಕ್ಕೂ ಕೇಸರಿ ಶಾಲು, ಭಗವಾ ಧ್ವಜ ರಾರಾಜಿಸಿದವು. ಭಾರತ ಮಾತಾಕೀ ಜೈ, ದುರ್ಗಾ ಮಾತಾಕೀ ಜೈ, ಜೈ ಶ್ರೀರಾಮ, ಜೈ ಹನುಮಾನ ಘೋಷಣೆ ಮಾರ್ಧನಿಸಿತು.


