ನಟ ಯಶ್ ಕಟೌಟ್ ಕಟ್ಟುವಾಗ ವಿದ್ಯುತ್ ತಗುಲಿ ಮೂವರು ಸಾವು ; ಭೇಟಿಗೆ ಹೊರಟ ಯಶ್
ಗದಗ : ರಾಕಿಂಗ್ ಸ್ಟಾರ್ ಯಶ್ ಕಟೌಟ್ ಕಟ್ಟುತ್ತಿದ್ದಾಗ ಆಕಸ್ಮಿಕ ವಿದ್ಯುತ್ ತಂತಿ ತಗುಲಿ ಮೂವರು ಅಭಿಮಾನಿಗಳು ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದಿದ್ದು, ಕುಟುಂಬದವರನ್ನು ಭೇಟಿ ಮಾಡಲು ಯಶ್ ಘಟನಾ ಸ್ಥಳಕ್ಕೆ ತೆರಳುವ ಮಾಹಿತಿ ಸಿಕ್ಕಿದೆ.
ಚಿತ್ರನಟ ಯಶ್ ಹುಟ್ಟಹಬ್ಬದ ನಿಮಿತ್ತ ಅವರ ಅಭಿಮಾನಿಗಳು ಲಕ್ಷ್ಮೇಶ್ವರ ತಾಲ್ಲೂಕಿನ ಸೂರಣಗಿಯಲ್ಲಿ 25 ಅಡಿ ಕಟೌಟ್ ಕಟ್ಟಲು ಮುಂದಾಗುತ್ತಿದ್ದಾಗ ಆಕಸ್ಮಿಕ ವಿದ್ಯುತ್ ಸ್ಪರ್ಶಿಸಿ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೂರಣಗಿಯ ನಿವಾಸಿಗಳಾದ ಹನುಮಂತ(21), ಮುರುಳಿ(20) ಮತ್ತು ನವೀನ್(21) ಮೃತ ದುರ್ದೈವಿಗಳು. ಘಟನೆಯಲ್ಲಿ ಇತರ ಮೂವರು ಅಭಿಮಾನಿಗಳಿಗೂ ತೀವ್ರವಾಗಿ ಗಾಯಗಳಾಗಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಎಲ್ಲರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

