ಸಾವು – ಬದುಕಿನ ಮಧ್ಯೆ ಹೋರಾಡುತ್ತಿದ್ದ ರಾಷ್ಟ್ರಪಕ್ಷಿ ರಕ್ಷಣೆ
ಯರಗಟ್ಟಿ : ಬಾವಿಗೆ ಬಿದ್ದು ಮೇಲೆ ಬರಲಾಗದೆ ಜೀವ ಭಯದಿಂದ ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯನ್ನು ರೈತರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿರುವ ಘಟನೆ ಯರಗಟ್ಟಿ ಪಟ್ಟಣದ ಸತ್ತಿಗೇರಿ ಗ್ರಾಮದಲ್ಲಿ ನಡೆದಿದೆ.
ಆಹಾರ ಅರಸುತ್ತಾ ಸಂಚಾರದಲ್ಲಿದ್ದ ನವಿಲು ಶನಿವಾರ ರಾತ್ರಿಯ ವೇಳೆಗೆ ಸಮೀಪದ ಸತ್ತಿಗೇರಿ ಗ್ರಾಮದ ಭೀಮಪ್ಪ ಮಿಲ್ಲಾನಟ್ಟಿ ಎಂಬವರ ಜಮೀನಿನ ಬಾವಿಗೆ ಬಿದ್ದಿತ್ತು. ಸೋಮವಾರ ಬೆಳಗ್ಗೆ 5 ಕ್ಕೆ ಬಾವಿಯಿಂದ ನೀರು ಎತ್ತಲು ಮನೆಯವರು ಬಂದಾಗ ಒದ್ದಾಡುತ್ತಿದ್ದ ನವಿಲನ್ನು ಗಮನಿಸಿ ರೈತ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರು.
ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿ ದುರ್ಗಪ್ಪ ಅರಟಗಲ್ ಬಾವಿಗೆ ಇಳಿದು ನವಿಲನ್ನು ರಕ್ಷಿಸಿದರು.
ನವಿಲನ್ನು ಮೇಲಕ್ಕೆತ್ತಿದ್ದು ಮೇಲೆ ಬಂದ ನವಿಲು ಯರಗಟ್ಟಿ ಪಶು ಆಸ್ಪತ್ರೆ ಕರೆತಂದು ಡಾ. ಎಂ. ವಿ. ಪಾಟೀಲ ಚಿಕಿತ್ಸೆ ನೀಡಿದರು. ಚಿಕಿತ್ಸೆ ಸ್ಪಂದಿಸಿದ್ದ ನವೀಲುನ್ನು ಮರಳಿ ಕಾಡಿಗೆ ನೀಡಲಾಯಿತು.
ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳಾದ ಉಪ ಅರಣ್ಯಾಧಿಕಾರಿ ಬಿ. ಎಲ್. ಉಪ್ಪಾರ, ಗಸ್ತು ಅರಣ್ಯಪಾಲಕರಾದ ಡಿ. ಎಂ. ಅರಟಗಲ್, ಆರ್. ಕೆ. ಪೂಜೇರ, ಸಿಬ್ಬಂದಿಯಾದ ಫಕ್ಕೀರಪ್ಪ ಹಣಬರ, ರೈತರು ಸಂಘದ ಅಧ್ಯಕ್ಷ ಶಿವಲಿಂಗಪ್ಪ ಬಿ.ಪಾಟೀಲ ಸೇರಿದಂತೆ ಅನೇಕ ಇದ್ದರು.
ನಮ್ಮ ಬದುಕು ಹಸನಾಗಬೇಕಿದ್ದರೆ ಕಾಡುಪ್ರಾಣ ಗಳು, ಪಕ್ಷಿಗಳು ಮತ್ತು ಅವುಗಳಿಗೆ ಆಶ್ರಯತಾಣವಾಗಿರುವ ಕಾಡಿನ ಸಂರಕ್ಷ ಣೆ ಅತ್ಯಗತ್ಯ. ಆದರೆ, ಮಾನವನ ದುರಾಸೆ, ಹಣದ ವ್ಯಾಮೋಹ, ಹುಚ್ಚುತನದಿಂದಾಗಿ ಇಂದು ಅನೇಕ ಕಾಡುಪ್ರಾಣ ಗಳು, ಪಕ್ಷಿಗಳು ವಿನಾಶದಂಚಿಗೆ ಬಂದಿವೆ. ಮುಂದೊAದು ದಿನ ಪ್ರಾಣ , ಪಕ್ಷಿಗಳನ್ನು ಚಿತ್ರದಲ್ಲೋ, ವಿಡಿಯೋದಲ್ಲೋ ತೋರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು.
ಈಗಾಗಲೇ ಕೆಲವು ಜೀವಿಗಳು ಭೂಮಿ ಮೇಲಿಂದ ಕಣ್ಮರೆಯಾಗಿವೆ. ಅವುಗಳ ಕುರುಹು ಕೂಡ ಇಲ್ಲ. ಈ ವಿಷಯದಲ್ಲಿ ಎಚ್ಚರವಹಿಸಬೇಕಿದ್ದ ಸರಕಾರಗಳು ಮತ್ತು ಅವು ರೂಪಿಸುವ ನೀತಿಗಳ ಪೊಳ್ಳುತನದಿಂದಾಗಿ ಇಂಥ ಅವಸ್ಥೆ ಎದುರಾಗಿದೆ. ‘ಹುಲಿ ಉಳಿಸಿ, ಕಾಡು ಬೆಳೆಸಿ’ ಎಂಬಂತ ಅಭಿಯಾನಗಳನ್ನು ಮಾಡಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ ಆದರಿಂದ ತಮ್ಮ ಸುತ್ತಮುತ್ತಲೂ ಕಾಡು ಪ್ರಾಣ ಗಳು ಹಾಗೂ ಪಕ್ಷಿಗಳು ತೊಂದರೆಯಿಲ್ಲ ಸಿಲ್ಲಕಿದ್ದರೆ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿ.
ಶಂಕರ ಅಂತರಗಟ್ಟಿ – ವಲಯ ಅರಣ್ಯಾಧಿಕಾರಿ, ಸವದತ್ತಿ

