ಯರಗಟ್ಟಿ : ಇಂದೇ ಗ್ರಾಮದ ಏಳು ಯುವಕರು ಭಾರತೀಯ ಸೇನೆ ಸೇರುವ ಮೂಲಕ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ.
ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲೂಕಿನ ಬೆನಕಟ್ಟಿಯಲ್ಲಿ ಗ್ರಾಮದ ಏಳು ಜನ ಭಾರತೀಯ ಸೇನೆಯಲ್ಲಿ ಅಗ್ನಿವೀರರಾಗಿ ಆಯ್ಕೆಯಾಗುವ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
ಮಲ್ಲಿಕಾರ್ಜುನ್ ದುರ್ಗಪ್ಪ ಮರ್ಚಪ್ನವರ, ವಿನಾಯಕ ಹಿರೇಮಠ್, ಮುತ್ತಪ್ಪ ಬಾಳಪ್ಪ ಶಿಂಗನ್ನವರ, ಅನಿಲ್ ಪಕೀರಪ್ಪ ಚೂರಿ, ಪ್ರಜ್ವಲ್ ಪ್ರಕಾಶ್ ಸಾವಳಗಿ, ವಿಠ್ಠಲ ಶಿವಪ್ಪ ಮಾತಾರಿ, ಸಂಗಮೇಶ್ ಹನಮಂತಪ್ಪ ಚಿಲಮುರ ಆಯ್ಕೆಯಾದ ಯುವಕರು.


