ಯಡೂರು ವೀರಭದ್ರೇಶ್ವರ ಜಾತ್ರಾ ನಿಮಿತ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ : ಶ್ರೀಶೈಲ ಜಗದ್ಗುರು

ಚಿಕ್ಕೋಡಿ : ಸಮೀಪದ ಯಡೂರು ಶ್ರೀ ವೀರಭದ್ರೇಶ್ವರ ವಿಶಾಳಿ ಜಾತ್ರಾಮಹೋತ್ಸವವನ್ನು ಜನೇವರಿ 17 ರಿಂದ 19 ರವರೆಗೆ ನಡೆಯಲಿದ್ದು ಈ ಹಿನ್ನಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿಲಾಗಿದೆ ಎಂದು ಶ್ರೀಶೈಲದ ಡಾ.ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಯಡೂರಿನಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಜನೇವರಿ 17 ರಂದು ಬೆಳಿಗ್ಗೆ 10 ಗಂಟೆಗೆ ಚಿಕ್ಕೋಡಿ, ಮಿರಜ ಸೇರಿದಂತೆ ಬೇರೆ-ಬೇರೆ ಊರುಗಳ ಪ್ರಸಿದ್ಧ ವೈಧ್ಯರ ತಂಡದಿಂದ ಮೂತ್ರ ಕೋಶ ಚಿಕಿತ್ಸೆ, ಹೃದಯ ಶಸ್ತ್ರ ಚಿಕಿತ್ಸೆ, ಕಣ್ಣು, ಎಲುಬು ಮತ್ತು ಕೀಲು ನೋವಿಗೆ ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ. ಆರೋಗ್ಯ ತಪಾಸಣೆಗೆ ಬರುವವರು ತಮ್ಮ ಆಧಾರಕಾರ್ಡ್, ಆಯುಷ್ಮಾನ ಕಾರ್ಡ್ ಮತ್ತು ಬಿಪಿಎಲ್ ಕಾರ್ಡ್ ತರಬೇಕು ಎಂದರು.
ಜನೇವರಿ 17 ರಂದು ಸಂಜೆ ಶ್ರೀಶೈಲ ಜಗದ್ಗುರು ಡಾ|| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾಯ೯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ “ಧಮ೯ ಜಾಗೃತಿ ಹಾಗೂ ಸಾಂಸ್ಕೃತಿಕ” ಸಮಾರಂಭ ವಿಜೃಂಭಣೆಯಿಂದ ಜರುಗಲಿದೆ. ಹುಕ್ಕೇರಿ, ಶಹಾಪೂರ, ಜಮಖಂಡಿ, ಅಂಬಿಕಾನಗರ, ನೂಲ ಹಾಗೂ ನೀಲಗಲ್ ಇಲಕಲ್ ಅನ್ನದಾನ ಶಾಸ್ತ್ರಿಗಳ ಸಮ್ಮುಖವಿದ್ದು, ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಸರ್ಕಾರದ ದೇಹಲಿ ವಿಶೇ಼ಷ ಪ್ರತಿನಿಧಿ ಪ್ರಕಾಶ ಹುಕ್ಕೇರಿಯವರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಡಾ. ಪ್ರಭಾಕರ ಕೋರೆಯವರು ವಹಿಸಲಿದ್ದಾರೆ. ಶಾಸಕರು, ಸಂಸದರು ಸೇರಿದಂತೆ ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.
ಜೊತೆಗೆ ನಮ್ಮ ನಾಡಿನ ಹೆಸರಾಂತ ಗಾಯಕಿ, ಯುವ ಪ್ರತಿಭೆ, ಝೀ ಕನ್ನಡ ಸರಿಗಮಪ 21 ನೇ ಸಿಜನ್ ವಿಜೇತರಾದ ಬೀದರಿನ ಶಿವಾನಿ ಶಿವದಾಸ ಸ್ವಾಮಿಯವರಿಂದ “ಸಂಗೀತ ಸಂಜೆ”, ವಿಜಯಪೂರ ಜಿಲ್ಲೆಯ ಮಹೇಲ್ ಐನಾಪೂರದ ಶ್ರೀ ಅಕ್ಕ ಮಹಾದೇವಿ ಭಜನಾ ಮಂಡಳಿಯ ಗಾನ ಕೋಗಿಲೆ ಶೋಭಾ ಹೋನವಾಡರಿಂದ ಶಿವಭಜನೆ. ಜೊತೆಗೆ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಜನೇವರಿ 18 ರಂದು ಸಂಜೆ 6:30ಕ್ಕೆ ಶ್ರೀ ಶ್ರೀಶೈಲ/ಯಡೂರ ಶ್ರೀಗಳ ಸಾನಿಧ್ಯದಲ್ಲಿ ಮಹಾರಾಷ್ಟ್ರ ಲಾತೂರ ಜಿಲ್ಲೆಯ ಶ್ರೀ ನಾಥ ಪಂಚಮ ಪೀಠಾಧಿಪತಿ ಗುರುಬಾಬಾ ಮಹಾರಾಜರು ಔಸೇಕರರಿಂದ “ಚಕ್ರಿಭಜನೆ ಹಾಗೂ ಧರ್ಮ ಜಾಗೃತಿ ಸಮಾರಂಭ ನಡೆಯಲಿದೆ. ಜಮಖಂಡಿಯ ಶಾಸಕ ಜಗದೀಶ ಗುಡಗುಂಟಿಮಠ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಚಿಕ್ಕೋಡಿ ಜನಪ್ರಿಯ ಶಾಸಕ ಗಣೇಶ ಹುಕ್ಕೇರಿ ವಹಿಸಲಿದ್ದಾರೆ. ಕ್ಯಾಲೇಂಡರ್ ಬಿಡುಗಡೆಯನ್ನು ನಿಪ್ಪಾಣಿಯ ಶಾಸಕಿ ಶಶಿಕಲಾ ಜೊಲ್ಲೆಯವರು ಮಾಡಲಿದ್ದಾರೆ. ಜೊತೆಗೆ ಪ್ರಸಿದ್ಧ ಗಾಯಕಿ ಶಿವಾನಿ ಶಿವದಾಸ ಸ್ವಾಮಿಯವರಿಂದ “ಸಂಗೀತ ಸಂಜೆ”, ಕಾರ್ಯಕ್ರಮ ಜರುಗಲಿದೆ ಎಂದರು.
ಜನೇವರಿ 19 ರಂದು ಸಂಜೆ 4 ಗಂಟೆಗೆ ಶ್ರೀ ಶ್ರೀಶೈಲ/ಯಡೂರ ಜಗದ್ಗುರುಗಳವರ ಸಾನಿಧ್ಯದಲ್ಲಿ ಬೆಳಗಾವಿಯ ಭೂತರಾಮನಹಟ್ಟಿ ಮುಕ್ತಿ ಮಂದಿರದ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಸ್ವಾಮಿಗಳು, ಹಿರೇಮುನವಳ್ಳಿಯ ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಮಹಾರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಅದ್ಯಕ್ಷತೆಯನ್ನು ಹೂಲಿ ಹಿರೇಮಠದ ಉಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ. ಮೈಶಾಳ, ಕಬ್ಬೂರ ಹಾಗೂ ಕರಿಭಂಟನಾಳ ಪೂಜ್ಯರು ನೇತೃತ್ವ ವಹಿಸಲಿದ್ದಾರೆ ಎಂದರು.
ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೋಳ್ಳುವ ಸಾವಿರಾರು ಭಕ್ತಾಧಿಗಳಿಗೆ ದಿ.17, 18, 19ರಂದು ಮೂರು ದಿನಗಳ ಮಹಾಪ್ರಸಾದದ ಸೇವೆಯನ್ನು “ದಾಸೋಹ ರತ್ನ” ಲಿಂ. ಶ್ರೀ ಚಕ್ರವರ್ತಿ ದಾನೇಶ್ವರ ಸ್ವಾಮಿಗಳು ನೀಲಮಾಣಿಕಮಠ, ಬಂಡಿಗಣಿ ಇವರ ಶ್ರೀ ಮಠದವರು ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶ್ರೀ ವೀರಭದ್ರ ದೇವಸ್ಥಾನದ ಉತ್ತರಾಧಿಕಾರಿ ರೇಣುಕಾ ದೇವರು, ಬೆಳ್ಳಂಕಿ ಶ್ರೀ, ಸುಬ್ಬರಾವ ಎಂಟೆತ್ತನವರ, ಮಲ್ಲಯ್ಯ ಜಡೆ, ಮಲ್ಲಪ್ಪ ಸಿಂಧೂರ, ಅಡವಯ್ಯ ಅರಳಿಕಟ್ಟಿಮಠ, ಗ್ರಾಪಂ ಸದಸ್ಯ ಮಂಚಂದ್ರ ಧನಗರ, ಶಿವು ಹಂಜಿ, ಹಿಪ್ಪರಗಿ ಮಠದ ಉತ್ತರಾಧಿಕಾರಿ ಅಭಿಷೇಕ ದೇವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
********
ಜನೇವರಿ 21 ರಂದು ಸಂಜೆ 4 ಗಂಟೆಗೆ ಬೆಳಗಾವಿಯಲ್ಲಿ ಸಂಚಾರಿ ಧರ್ಮ ಜಾಗೃತಿ ಯಾತ್ರೆಯ ಉದ್ಘಾಟನೆ ಹಾಗೂ ರಾಣಿ ಚೆನ್ನಮ್ಮ ವೃತ್ತದಿಂದ ಗಾಂಧಿ ಭವನದವರೆಗೆ ಭದ್ರಕಾಳಿ- ಶ್ರೀ ವೀರಭದ್ರೇಶ್ವರ ಮೂರ್ತಿಗಳ ಉತ್ಸವ ಜರುಗಲಿದೆ. ಅತ್ಯಂತ ವಿಜೃಂಭಣೆಯಿಂದ ಜರಗುವ ಈ ಎಲ್ಲಾ ಕಾಯ೯ಕ್ರಮಗಳಲ್ಲಿ ಸದ್ಭಕ್ತ ಬಂಧುಗಳು ಪಾಲ್ಗೋಂಡು ಶ್ರೀ ವೀರಭದ್ರ ದೇವ- ಕಾಡದೇವರ ಕೃಪೆಗೆ ಪಾತ್ರರಾಗಬೇಕು.
ಶ್ರೀಶೈಲದ ಡಾ.ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿ, ಯಡೂರು.
******

