
ಬಾಗಪ್ಪ ಹರಿಜನ ಹತ್ಯೆಗೆ ಇವರೇ ಕಾರಣ ; ಮಗಳು ಕೊಟ್ಟ ದೂರಿನಲ್ಲಿ ಏನಿದೆ….?

ವಿಜಯಪುರ : ಬಾಗಪ್ಪ ಹರಿಜನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಮಗಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನ್ನ ತಂದೆ ಸಾವಿಗೆ ಇವರೇ ಕಾರಣ ಎಂದು ಅನುಮಾನ ವ್ಯಕ್ತಪಡಿಸಿದ್ದಾಳೆ.
ಪ್ರಕರಣದಲ್ಲಿ ಪಿಂಟ್ಯಾ ಎಂಬಾತನ ಹೆಸರು ಕೇಳಿಬಂದಿದೆ. ಸಧ್ಯ ಬಾಗಪ್ಪ ಹರಿಜನ ಕೊಲೆ ಪ್ರಕರಣ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ. ಈ ಹಿಂದೆ ಗುಂಡಿನ ದಾಳಿಯಲ್ಲಿ ಉಳಿದಿದ್ದ ಬಾಗಪ್ಪ ಈಗ ದಾಳಿಗೆ ಬಲಿಯಾಗಿದ್ದಾನೆ.
ಬಾಗಪ್ಪ ಮಗಳು ಗಂಗೂಬಾಯಿ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ಹಿಂದೆ ಕೊಲೆ ಆಗಿದ್ದ ರವಿ ಅಗರಖೇಡ್ ಸಹೋದರ ಪಿಂಟ್ಯಾ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ವಿಜಯಪುರ ಕೋರ್ಟ್ ಆವರಣದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ರವಿ ಮೇಲೆ ಅಟ್ಯಾಕ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ರವಿ ನರಳಾಡಿ ಪ್ರಾಣ ಬಿಟ್ಟಿದ್ದ. ಇದೇ ಕಾರಣಕ್ಕೆ ರವಿ ಹತ್ಯೆಗೆ ಪ್ರತೀಕಾರವಾಗಿ ಬಾಗಪ್ಪ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.