Accident ಪಲ್ಸರ್ ಬೈಕ್ ಗುದ್ದಿ ಸ್ಥಳದಲ್ಲೇ ನಾಲ್ವರು ಯುವಕರು ಸಾವು
ವಿಜಯಪುರ : ನಾಟಕ ನೋಡಿಕೊಂಡು ತೆರಳುತ್ತಿದ್ದ ಯುವಕರ ಗುಂಪಿನತ್ತ ವೇಗವಾಗಿ ಬಂದ ಪಲ್ಸೆರ್ ಬೈಕ್ ಗುದ್ದಿದ ಪರಿಣಾಮ ನಾಲ್ವರು ಯುವಕರು ಸಾವಣಪ್ಪಿದ್ದು ಮೂವರ ಸ್ಥಿತಿ ಗಂಭೀರವಾಗಿದೆ.
ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಹೊರವಲಯದಲ್ಲಿ ಘಟನೆ ಸಂಭವಿಸಿದೆ. ಅಪಘಾತದಲ್ಲಿ
ಅನಿಲ ಖೈನೂರ (23), ನಿಂಗರಾಜ್ ಚೌಧರಿ (ಬೈಕ್ ಸವಾರ) ( 22 ), ಕುಮಾರ ಪ್ಯಾಟಿ (18), ರಾಯಪ್ಪ ಬಾಗೇವಾಡಿ (24) ಮೃತ ದುರ್ದೈವಿಗಳು.
ನಾಟಕ ನೋಡಲು ಗುಂಪಾಗಿ ಹೋಗ್ತಿದ್ದವರ ಮೇಲೆ ಹರಿದ ಪಲ್ಸರ್ 200 CC ಬೈಕ್. ಗುರುವಾರ ರಾತ್ರಿ 11.30 ಕ್ಕೆ ನಡೆದ ಘಟನೆ. ಶಾಹಿದ ಹುನಗುಂದ,ಪ್ರಶಾಂತ ಕುರುಬಗೌಡರ, ಹನಮಂತ ಕರುಬಗೌಡರ ಸ್ಥಿತಿ ಚಿಂತಾಜನಕ.
ಗಾಯಾಳುಗಳು ಬಾಗಲಕೋಟ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಮುದ್ದೇಬಿಹಾಳ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


