ವೈರಲ್ ಆಯ್ತು ವರ್ತೂರು ಸಂತೋಷ್ ಮದುವೆ ಪೋಟೋ..? ಹಳ್ಳಿಕಾರ್ ಏ ಕ್ಯಾ ಹೈ ಎಂದ ನೆಟ್ಟಿಗರು..!
ಬೆಂಗಳೂರು : ಬಿಗ್ ಬಾಸ್ ಮನೆಯಿಂದ ಕಳೆದ ಕೆಲ ದಿನಗಳ ಹಿಂದೆ ಹುಲಿ ಉಗುರು ಪ್ರಕರಣದಲ್ಲಿ ಸಿಲುಕಿ ಜೈಲು ಸೇರಿದ್ದ ವರ್ತೂರ್ ಸಂತೋಷ್ ಸಧ್ಯ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಇವರ ಮದುವೆ ಕುರಿತು ಕೆಲ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಈ ಕುರಿತು ಸಧ್ಯ ವರ್ತೂರು ಸಂತೊಷ್ ಅವರ ಮದುವೆ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ( varthur santhosh marriage ) ಅಷ್ಟೇ ಅಲ್ಲದೆ ಇವರ ಪತ್ನಿ ತಂದೆಯದ್ದು ಎನ್ನಲಾಗುತ್ತಿರುವ ಆಡಿಯೋ ಒಂದು ಎಲ್ಲೆಡೆ ಹರಿದಾಡುತ್ತಿದ್ದು ಕುರಿತು ಅನೇಕ ಚರ್ಚೆಗಳು ಎದ್ದಿವೆ.
ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ವೈಯಕ್ತಿಕ ವಿಚಾರಗಳ ಕುರಿತು ಅಲ್ಲಿರುವ ಆಟಗಾರರು ಎಲ್ಲವನ್ನೂ ಹಂಚಿಕೊಳ್ಳುತ್ತಾರೆ. ಆದರೆ ವರ್ತೂರು ಸಂತೋಷ್ ಮಾತ್ರ ಈ ಕುರಿತು ಯಾವುದೇ ವಿಷಯ ಹಂಚಿಕೊಳ್ಳದೆ ಇರುವುದು ಚರ್ಚೆಗೆ ಕಾರಣವಾಗಿದೆ. ( Bigg boss – Kannada )
ಇನ್ನೂ ಪದೇ ಪದೇ ವರ್ತೂರು ಸಂತೋಷ್ ಅವರ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಹಿಂದೆ ಹುಲಿ ಉಗುರು ವಿಚಾರವಾಗಿ ರಾಜ್ಯಾದ್ಯಂತ ಸುದ್ದಿ ಆಗಿದ್ದ ಇವರು ಸಧ್ಯ ಮದುವೆ ವಿಚಾರದಲ್ಲಿ ಮತ್ತೊಮ್ಮೆ ಸುದ್ದಿಯಾಗುತ್ತಿರುವುದು ಅಚ್ಚರಿ.
ಇನ್ನೂ ವರ್ತೂರು ಸಂತೋಷ್ ಅವರ ಮದುವೆ ಪೋಟೋ ಹಾಗೂ ಆಡಿಯೋ ಕುರಿತು ಅವರ ಮನೆಯವರು ಯಾವುದೇ ಅಭಿಪ್ರಾಯ ಹಂಚಿಕೊಂಡಿಲ್ಲ. ಈ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ನಾನಾ ಬಗೆಯ ಚರ್ಚೆಗಳು ನಡೆಯುತ್ತಿವೆ.


