ಬೆಳಗಾವಿ : ಗ್ರಾಮೀಣ ಭಾಗದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಿಯುಸಿ ನಂತರದಲ್ಲಿ ಬರೆಯುವ ಸಿಇಟಿಗೆ ನೆರವಾಗುವ ನಿಟ್ಟಿನಲ್ಲಿ‌ ವಿದ್ಯಾಮೃತ – 2024 ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದ್ದು ಕೇವಲ 950 ರೂ. ನಲ್ಲಿ K – CET ತರಬೇತಿ ನೀಡಲಾಗುತ್ತಿದೆ.

ವಿಕಸನ ಫೌಂಡೇಶನ್ ಜಾರಿಗೆ ತಂದಿರುವ ವಿದ್ಯಾಮೃತ ಯೋಜನೆಗೆ ಸಹಕಾರಿಯಾಗಿ ರಾಮಕೃಷ್ಣ ಆಶ್ರಮ, ಬಿಎನ್ಎಮ್ಐಟಿ, ಸ್ವಾಮಿ ವಿವೇಕಾನಂದ ಶ್ರೇಷ್ಠ ಭಾರತ ಪ್ರತಿಷ್ಠಾನ ಹಾಗೂ ವಿವೇಕ ವಿದ್ಯಾ ವಾಹಿನಿ ಟ್ರಸ್ಟ್ ಇದ್ದು ಬಡ ವಿದ್ಯಾರ್ಥಿಗಳಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿದೆ.

ಪಿಯುಸಿ ಪರೀಕ್ಷೆ ಮುಕ್ತಾಯವಾದ ನಂತರದಲ್ಲಿ K-CET ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೇವಲ 950 ರೂ. ನಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರದಿಂದ ಆಯ್ದು ತಲಾ‌ ನೂರು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಇನ್ನುಳಿದ 9050 ರೂ. ತರಬೇತಿ ವೆಚ್ಚವನ್ನು ಮೇಲಿನ ಸಂಸ್ಥೆಗಳ ಸಹಕಾರದಿಂದ ನೀಡಲಾಗುತ್ತದೆ. ಇದರ ಉಪಯೋಗವನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಸಂಸ್ಥೆ ಮನವಿ ಮಾಡಿದೆ.

ಈ ಕಾರ್ಯಾಗಾರದ ಕುರಿತು ಹೆಚ್ಚಿನ ಮಾಹಿತಿಯನ್ನು 9035548499 ಸಂಖ್ಯೆಗೆ ಸಂಪರ್ಕಿಸಬಹುದು.