Select Page

Advertisement

ಉತ್ತರಕ್ಕೆ ಕೊಡದ ಮಹತ್ವ ಕಾವೇರಿಗೆ ಅಷ್ಟೇ ಯಾಕೆ? ; ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ

ಉತ್ತರಕ್ಕೆ ಕೊಡದ ಮಹತ್ವ ಕಾವೇರಿಗೆ ಅಷ್ಟೇ ಯಾಕೆ? ; ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ

ಬೆಂಗಳೂರು : ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಗಾಗಿ ದಕ್ಷಿಣ ಕರ್ನಾಟಕ ಸರಿಯಾದ ಬೆಂಬಲ ನೀಡುವುದಿಲ್ಲ. ಈಗ ಕಾವೇರಿ ಹೋರಾಟ ಪ್ರಾರಂಭವಾಗಿದ್ದು ರಾಜ್ಯ ಬಂದ್ ಮಾಡುವುದು ಏಕೆ. ಉತ್ತರ ಕರ್ನಾಟಕ ಬಂದ್ ಮಾಡುವ ಅವಶ್ಯತೆ ಏನಿದೆ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ.

ಕೆಲವರು ತಮ್ಮ ಫೇಸ್ಬುಕ್ ಪುಟಗಳನ್ನು ಭಿನ್ನ ಅಭಿಪ್ರಾಯ ಹಂಚಿಕೊಂಡಿದ್ದು, ಮಹದಾಯಿ, ಕೃಷ್ಣಾ ನೀರಾವರಿ ಯೋಜನೆ ಹಾಗೂ ಮಹಾರಾಷ್ಟ್ರ ಮತ್ತು ಗೋವಾ ನಡುವಿನ ಬಿಕ್ಕಟ್ಟು ಕುರಿತು ದಕ್ಷಿಣ ಕರ್ನಾಟಕದಿಂದ ಪ್ರಭಲ ದ್ವನಿ ಏಳುವುದಿಲ್ಲ. ಈಗ ಕಾವೇರಿಗೆ ಕೊಡುವ ಮಹತ್ವ ಕೃಷ್ಣೆಗೆ ಯಾಕಿಲ್ಲ ಎಂಬ ಪ್ರಶ್ನೆ ಸಹಜವಾಗಿ ಮೂಡಿದೆ.

ಇನ್ನೂ ಅನೇಕರು ಕಾಮೆಂಟ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ನೀರಾವರಿ ಯೋಜನೆಗಾಗಿ ರೈತರು ದಶಕಗಳಿಂದ ಹೋರಾಟ ನಡೆಸಿದರು ಯಾವುದೇ ಲಾಭವಾಗಿಲ್ಲ. ಕೇವಲ ನೈತಿಕ ಬೆಂಬಲ ಬಿಟ್ಟು ಯಾವುದೇ ರೀತಿಯ ಹೋರಾಟಕ್ಕೆ ದಕ್ಷಿಣ ಕರ್ನಾಟಕ ಕೈ ಜೋಡಿಸಲ್ಲ ಎಂಬ ಆರೋಪವನ್ನು ಕೆಲವರು ಮಾಡಿದ್ದಾರೆ.

ಸಧ್ಯ ಕಾವೇರಿ ನದಿ ನೀರು ಹಂಚಿಕೆ ಕುರಿತು ತಮಿಳುನಾಡಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲು ಕೋರ್ಟ್ ನಿರ್ದೇಶನ ಮಾಡಿದ್ದರ ಪರಿಣಾಮ ಈಗಾಗಲೇ ಹೋರಾಟಗಳು ತೀವ್ರಗೊಂಡಿವೆ. ಹಾಗೆಯೆ ರಾಜ್ಯದ ಜನರಿಗೆ ಅನ್ಯಾಯ ಆಗುತ್ತಿರುವುದು ಸ್ಪಷ್ಟ. ಈ ಕಾರಣದಿಂದ ಕೇಂದ್ರ ಹಾಗೂ ಜಲ ಮಂಡಳಿಗೆ ಬಿಸಿ ಮುಟ್ಟಿಸುವ ಉದ್ದೇಶದಿಂದ ರೈತರು ಹಮ್ಮಿಕೊಂಡ ಹೋರಾಟ ಯಶಸ್ವಿಯಾಗಬೇಕು.‌

ಜೊತೆಗೆ ಕಾವೇರಿ, ಕೃಷ್ಣಾ ಸೇರಿದಂತೆ ರಾಜ್ಯದ ಯಾವುದೇ ಮೂಲೆಯಲ್ಲಿ ಕನ್ನಡಿಗರಿಗೆ ಅನ್ಯಾಯ ಆದರೆ ಈವರೆಗೆ ಎಲ್ಲರೂ ಒಗ್ಗಟ್ಟಾಗಿ ಹೋರಾಡಿದ್ದು, ಮುಂದೆಯು ಯಾವುದೇ ಭೇದ ಭಾವ ಇಲ್ಲದೆ. ರಾಜ್ಯದ ಪರವಾದ ಗಟ್ಟಿ ಧ್ವನಿ ಇರಲಿ ಎಂಬುದು ನಮ್ಮ ಆಶಯ.

Advertisement

Leave a reply

Your email address will not be published. Required fields are marked *

error: Content is protected !!