Select Page

ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು:ಡಾ. ಸೋನಾಲಿ ಸರ್ನೋಬತ್

ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು:ಡಾ. ಸೋನಾಲಿ ಸರ್ನೋಬತ್

ಬೆಳಗಾವಿ ; ಮನೆಯ ಸಂಪೂರ್ಣ ಜವಾಬ್ದಾರಿ ವಹಿಸುವ ಹೆಣ್ಣುಮಕ್ಕಳು ತಮ್ಮ ಆರೋಗ್ಯದ ಕುರಿತು ನಿರ್ಲಕ್ಷ್ಯ ವಹಿಸಬಾರದು. ಮನಸಿಗೆ ಆಹ್ಲಾದ ನೀಡುವ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸದೃಢವಾಗಿ ಉಳಿಸಿಕೊಳ್ಳಲು ಸಾಧ್ಯ ಎಂದು ಖ್ಯಾತ ಹೋಮಿಯೋಪತಿ ವೈದ್ಯೆ, ಸಾಹಿತಿ, ಡಾ. ಸೋನಾಲಿ ಸರ್ನೋಬತ್ ಅಭಿಪ್ರಾಯಪಟ್ಟರು.

ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ದತ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಇಂದಿನ ದಿನದಲ್ಲಿ ಸಾಮಾಜಿಕ ಜಾಲತಾಣಗಳ ಬೆನ್ನು ಬಿದ್ದು ನಾವು ಚಟುವಟಿಕೆಗಳಿಂದ ದೂರವಾಗುತ್ತಿದ್ದೇವೆ.ಮೊಬೈಲ್ ಹಿಡಿದು ಕುಳಿತಲ್ಲೇ ಕುಳಿತುಕೊಳ್ಳುವುದರಿಂದ ದೈಹಿಕ ವ್ಯಾಯಾಮ ಇಲ್ಲದೆ ಶರೀರದಲ್ಲಿ ರೋಗ ಹೆಚ್ಚುತ್ತಿದೆ. ದಿನವೂ ವಾಕಿಂಗ್, ಯೋಗ ಮತ್ತು ಧ್ಯಾನದ ಜತೆಜತೆಗೆ ಉತ್ತಮ ಪುಸ್ತಕಗಳ ಓದು ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಸಹಕಾರಿ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ನೀಲಗಂಗಾ ಚರಂತಿಮಠ ಮಾತನಾಡಿ, ಯಾವುದೇ ಕಥೆ ರಚಿಸುವುದು ಎಂದರೆ ಆ ಕತೆಗಾರ ಪ್ರತಿಯೊಂದು ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಬೇಕು. ಯಾವ ಪ್ರದೇಶ ಕತೆ ಬರೆಯುವನೋ ಅಲ್ಲಿನ ಬಗ್ಗೆ ತಿಳಿದುಕೊಳ್ಳಬೇಕು.ಎಂದು ಹೇಳಿದರು.

ದಿ.ಕಂಪಾ ಸೋಮಶೇಖರರಾವ್ ದತ್ತಿ ದಾನಿಗಳಾದ ಕೀರ್ತಿಶೇಖರ ಕಾಸರಗೋಡು, ದಿ. ದುರದುಂಡೇಶವರ ಸಿದ್ದಯ್ಯ ಮಲ್ಲಾಪುರ ದತ್ತಿ ದಾನಿಗಳಾದ ಸುಮಿತ್ರಾ ಮಲ್ಲಾಪುರ, ದಿ. ಸರಸ್ವತಿಶ್ರೀ ದೇಸಾಯಿ ದತ್ತಿದಾನಿಗಳಾದ ರೇಖಾ ಶ್ರೀನಿವಾಸ, ದಿ.ಮಲ್ಲಪ್ಪ ಮುದುಕಪ್ಪ ಚೌಗಲೆ ದತ್ತಿ ದಾನಿಗಳಾದ ಹೀರಾ ಚೌಗಲೆ ಅವರು ವೇದಿಕೆಯಲ್ಲಿದ್ದರು.ಸಂಘದ ಸದಸ್ಯೆಯರಿಗಾಗಿ ಕಿರುಕಥಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಕಾರ್ಯದರ್ಶಿ ಡಾ. ಭಾರತಿ ಮಠದ, ಅನ್ನಪೂರ್ಣ ಹಿರೇಮಠ, ಸುಮಾ ಕಿತ್ತೂರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!