ಸಂಘದ ನಿಷ್ಠಾವಂತ ಪ್ರಮುಖ ತುಷಾರ್ ಬಾಳೇಕುಂದ್ರಿ ವಿಧಿವಶ
ಬೆಳಗಾವಿ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬೆಳಗಾವಿ ವಿಭಾಗದ ಶಾಖಾ ಪ್ರಮುಖ ತುಷಾರ್ ಬಾಳೇಕುಂದ್ರಿ ( 43 ) ವಿಧಿವಶರಾಗಿದ್ದಾರೆ.
ಸಂಘದ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದ ತುಷಾರ್ ಅವರು ಯುವಕರಲ್ಲಿ ದೇಶಭಕ್ತಿ ಗುಣಗಳನ್ನು ತುಂಬುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎಲೆಮರೆಯ ಕಾಯಿಯಂತೆ ಸಂಘ ಕೊಟ್ಟ ಜವಾಬ್ದಾರಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಅವರ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
ಮೃತರ ಆತ್ಮಕ್ಕೆ ಬೆಳಗಾವಿ ಬಿಜೆಪಿ ಮುಖಂಡ ಮಹಾಂತೇಶ್ ವಕ್ಕುಂದ ಸೇರಿ ಹಲವರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.