ಕಾಗವಾಡ : ತಾಲೂಕಿನ ಉಗಾರ ಪಟ್ಟಣದ ಉಗಾರ ಸಕ್ಕರೆ ಕಾರ್ಖಾನೆಯ ಮಾಲೀಕರು, ಹಿರಿಯ ಸಕ್ಕರೆ ಉದ್ಯಮಿ ಹಾಗೂ ಸಮಾಜಸೇವಕರಾದ ರಾಜಾಭಾವು ಶಿರಗಾಂವ್ಕರ್ (91) ಅವರು ಗುರುವಾರ ಬೆಳಿಗ್ಗೆ ನಿಧನ ಹೊಂದಿದ್ದಾರೆ.
ರಾಜಾಭಾವು ಶಿರಗಾಂವ್ಕರ್ ಅವರು ಉಗಾರ ಸಕ್ಕರೆ ಕಾರ್ಖಾನೆಯ ಸಂಪೂರ್ಣ ಏಳಿಗೆಗಾಗಿ ಶ್ರಮಿಸಿದರು. ಕಬ್ಬು ಬೆಳೆಗಾರರಾದ ರೈತರೊಂದಿಗೆ ಸ್ನೇಹಭಾವ ಹೊಂದಿದ್ದರು.
ನವದೆಹಲಿಯ ಇಂಡಿಯನ್ ಶುಗರ್ ಎಕ್ಸಿಮ್ ಕಾರ್ಪೊರೇಷನ್ (ಐಎಸ್‌ಇಸಿ) ಸಂಸ್ಥೆಯ ಅಧ್ಯಕ್ಷರಾಗಿ ಕೆಲ ವರ್ಷ ಸೇವೆ ಸಲ್ಲಿಸಿದ್ದ ಅವರು, ಸಕ್ಕರೆ ಉದ್ಯಮ ಕ್ಷೇತ್ರದಲ್ಲಿ ವಿಶಿಷ್ಟ ಕೊಡುಗೆ ನೀಡಿದ್ದರು.
ಉಗಾರ ಲಯನ್ಸ್ ಕ್ಲಬ್‌ನ ಸಂಸ್ಥಾಪಕರಾಗಿದ್ದ ಅವರು, ಸಾಂಗ್ಲಿಯ ಖ್ಯಾತ ನೂತನ ಬುದ್ಧಿಬಲ ಸಂಸ್ಥೆಯ ಸಂಸ್ಥಾಪಕರಾಗಿಯೂ ಗುರುತಿಸಿಕೊಂಡಿದ್ದರು.
ಅಂತ್ಯಕ್ರಿಯೆಯು ಉಗಾರದ ರುದ್ರಭೂಮಿಯಲ್ಲಿ ಸಂಜೆ ಜರುಗಲಿದೆ ಎಂದು ಉಗಾರ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕರು ತಿಳಿಸಿದ್ದಾರೆ.
ಖ್ಯಾತ ಉದ್ಯಮಿ ಹಾಗೂ ಉಗಾರ್ ಸಕ್ಕರೆ ಕಾರ್ಖಾನೆ ಮಾಲಿಕ ರಾಜಾಭಾವು ಶಿರಗಾಂವ್ಕರ್ ನಿಧನ


