ಸಿಎಂ ಸಿದ್ದುಗೆ ಇಂದು ಮಹತ್ವದ ದಿನ ; ಕೋರ್ಟ್ ಆದೇಶದ ಮೇಲೆ ಭವಿಷ್ಯ ನಿರ್ಧಾರ
ಬೆಂಗಳೂರು : ಎರಡನೇ ಅವಧಿಗೆ ಯಶಸ್ವಿಯಾಗಿ ಮುಖ್ಯಮಂತ್ರಿ ಸ್ಥಾನ ಪಡೆದ ಸಿಎಂ ಸಿದ್ದರಾಮಯ್ಯ ಅವರಿಗೆ ಇಂದು ರಾಜಕೀಯ ಬದುಕಿನ ಮಹತ್ವದ ದಿನ ಆಗಲಿದೆ.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ವಿರುದ್ಧ ತನಿಖೆಗೆ ರಾಜ್ಯಪಾಲರು ನೀಡಿರುವ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಡಿಲೇರಿದ್ದಾರೆ. ಈ ಕುರಿತು ಆಗಸ್ಟ್ 29 ರಂದು ವಾದ ಪ್ರತಿವಾದ ನಡೆದಿತ್ತು.
ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠದ ಮುಂದೆ ವಾದ ನಡೆಯಲಿದ್ದು ಸಿಎಂ ಪರ ಸುಪ್ರೀಂ ಕೋರ್ಟ್ ವಕೀಲ ಅಭಿಷೇಕ ವನು ಸಿಂಗ್ವಿ ವಾದ ಮಂಡಿಸಲಿದ್ದಾರೆ. ಕಳೆದ ಗುರುವಾರ ಅಭಿಷೇಕ್ ಸಿಎಂ ವಿರುದ್ಧ ತನಿಖೆಗೆ ಆದೇಶ ನೀಡದಂತೆ ವಾದ ಮಂಡಿಸಿದ್ದರು.
ಇಂದು 10:30 ಕ್ಕೆ ನ್ಯಾಯಪೀಠದಲ್ಲಿ ಮುಡಾ ಹಗರಣದ ಕುರಿತು ವಿಚಾರಣೆ ನಡೆಯಲಿದ್ದು ಸಧ್ಯ ಯಾರ ಪರ ಕೋರ್ಟ್ ಆದೇಶ ಬರುತ್ತದೆ ಎಂದು ಜನ ಕಾತರದಿಂದ ಕಾಯುತ್ತಿದ್ದಾರೆ.