Select Page

Advertisement

ಯಾರಿಗೆಲ್ಲ‌ ಪೈನಲ್ ಆಯ್ತು ಮಂತ್ರಿ ಸ್ಥಾನ..? ಇಲ್ಲಿದೆ ಸಂಪೂರ್ಣ ವಿವರ

ಯಾರಿಗೆಲ್ಲ‌ ಪೈನಲ್ ಆಯ್ತು ಮಂತ್ರಿ ಸ್ಥಾನ..? ಇಲ್ಲಿದೆ ಸಂಪೂರ್ಣ ವಿವರ

ಬೆಳಗಾವಿ : ಸಿದ್ದರಾಮಯ್ಯ ನೇತೃತ್ವದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಪಕ್ಷ ಸಧ್ಯ ಸಚಿವ ಸಂಪುಟ ವಿಸ್ತರಣೆ ಕಸರತ್ತು ನಡೆಸುತ್ತಿದೆ. ಅನೇಕ ಶಾಸಕರು ಸಚಿವಸ್ಥಾನದ ಪಟ್ಟು ಹಿಡಿದು ಕುಳಿತಿದ್ದಾರೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಜೊತೆ ಎಂಟು ಜನ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಸಧ್ಯ ಕುತೂಹಲ ಮೂಡಿಸಿರುವ ಸಚಿವ ಸಂಪುಟ ರಚನೆ ಕಸರತ್ತು ಕೊನೆಯ ಹಂತ ತಲುಪಿದೆ. 24 ಶಾಸಕರು ಸಿದ್ದರಾಮಯ್ಯ ಸಂಪುಟಕ್ಕೆ ಸೇರ್ಪಡೆ ಆಗಲಿದ್ದು ಪ್ರಮಾಣವಚನ ಕಾರ್ಯಕ್ರಮಕ್ಕೆ ರಾಜ್ಯಪಾಲರ ಬಳಿ ಸಮಯಾವಕಾಶ ಕೇಳಲಾಗಿದೆ ಎಂದು ಹೇಳಲಾಗುತ್ತಿದೆ.

ನೂತನ ಸಚಿವರ ಪಟ್ಟಿ –

ಈಶ್ವರ ಖಂಡ್ರೆ , ಲಕ್ಷ್ಮೀ ಹೆಬ್ಬಾಳ್ಕರ್, ಶಿವಾನಂದ ಪಾಟೀಲ್, ಶರಣಬಸಪ್ಪ ದರ್ಶನಾಪೂರ, ಹೆಚ್ ಸಿ ಮಹಾದೇವಪ್ಪ, ಪಿರಿಯಾಪಟ್ಟಣ ವೆಂಕಟೇಶ, ಕೃಷ್ಣಭೈರೇಗೌಡ, ಎಸ್ ಎಸ್ ಮಲ್ಲಿಕಾರ್ಜುನ, ಬೈರತಿ ಸುರೇಶ್, ಪುಟ್ಟರಂಗಶೆಟ್ಟಿ, ರಹೀಂ ಖಾನ್, ಸಂತೋಷ ಲಾಡ್, ಮಧು ಬಂಗಾರಪ್ಪ, ಆರ್.ಬಿ ತಿಮ್ಮಾಪುರ, ರುದ್ರಪ್ಪ ಲಮಾನಿ, ಶರಣಪ್ರಕಾಶ ಪಾಟೀಲ್, ಬೋಸರಾಜು, ಬಿ. ನಾಗೇಂದ್ರ, ಎಂ, ಸಿ ಸುಧಾಕರ, ಹೆಚ್,ಕೆ ಪಾಟೀಲ್, ಚಲುವರಾಯಸ್ವಾಮಿ, ಕೆ,ಎನ್ ರಾಜಣ್ಣ, ಮಂಕಾಳು ವೈದ್ಯ, ಶಿವರಾಜ ತಂಗಡಗಿ.

ಇನ್ನೂ ಕೆಲ ಹೆಸರುಗಳು ಅಚ್ಚರಿಯಾಗಿ ಬರುವ ನಿರೀಕ್ಷೆ ಇದ್ದು, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸೇರಿದಂತೆ ಹಲವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮಾತುಕತೆ ನಡೆದಿದೆ ಎಂದು ಹೇಳಲಾಗುತ್ತಿದೆ.

Advertisement

Leave a reply

Your email address will not be published. Required fields are marked *

error: Content is protected !!