ಅಥಣಿ : ಅಥಣಿ ಪಟ್ಟಣದ ರಡ್ಡೇರಹಟ್ಟಿ ರಸ್ತೆಯಲ್ಲಿರುವ ಶಿವಶಕ್ತಿ ಲಾಡ್ಜ್ ನಲ್ಲಿ ಮಹಿಳೆಯನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿವಶಕ್ತಿ ಲಾಡ್ಜ್ ಮ್ಯಾನೆಂಜರ್ ರಾಹುಲ್ ಮಡ್ಡಿ ಹಾಗೂ ಗಣೇಶ ಸಂಕಪಾಳ ಮಹಿಳೆಯನ್ನು ಇಟ್ಟುಕೊಂಡು ವೇಶ್ಯಾವಾಟಿಕೆ‌ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ತಾಲೂಕಿನ ಅರಟಾಳ ಗ್ರಾಮದ ಮಾಳಪ್ಪ ದಿಲೀಪ್ ಕಾಂಬಳೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಥಣಿ ಸಿಪಿಐ‌ ಸಂತೋಷ ‌ಹಳ್ಳೂರ ನೇತೃತ್ವದಲ್ಲಿ ದಾಳಿ ನಡೆದಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.