ಅಥಣಿ : ಬೌಬೌ ಹುಚ್ಚಾಟ, ಅಥಣಿಗೆ ಗನ್ ಸಂಸ್ಕೃತಿ ಪರಿಚಯಿಸಿದ ಅಥಣಿ ಪುರಸಭೆ ಅಧಿಕಾರಿ ಅಶೋಕ ಗುಡಿಮನಿ ಅವರನ್ನು ಅಮಾನತುಗೊಳಿಸಿ ಸರಕಾರ ಆದೇಶ ಹೊರಡಿಸಿದೆ.

ಅಥಣಿ ಪುರಸಭೆ ಮುಖ್ಯಾಧಿಕಾರಿ ಹುಚ್ಚಾಟ ಸೇರಿದಂತೆ ಸಮಗ್ರ ಆರೋಪಗಳ ಕುರಿತು ಬೆಳಗಾವಿ ವಾಯ್ಸ್….

ಲಕ್ಷ್ಮಣ ಸವದಿ ಕ್ಷೇತ್ರದಲ್ಲಿ ಅಧಿಕಾರಿಗಳ ಬೌ..ಬೌ..ಆಟ ; ಗನ್ ಸಂಸ್ಕೃತಿ, ಹುಚ್ಚಾಟದ ಹೇಳಿಕೆ, ಲೋಕಾಯುಕ್ತರಿಂದ ಮಂಗಳಾರತಿ..! ಅಥಣಿಯಲ್ಲಿ ಹೆಣ್ಣು ನಾಯಿಗೆ ಅಪಮಾನ
ಶಿರ್ಶಿಕೆ ಅಡಿಯಲ್ಲಿ ಸುದ್ದಿ ಪ್ರಕಟವಾಗಿತ್ತು.

ಸಾರ್ವಜನಿಕ ಬದುಕಿನಲ್ಲಿ ಇದ್ದು ಹುಚ್ಚಾಟ ಮೆರೆಯುತ್ತಾ ಕಾನೂನು ವಿರೋಧವಾಗಿ ಅಧಿಕಾರಿ ನಡೆಸುತ್ತ ಜನರ ಆಕ್ರೋಶಕ್ಕೆ ಗುರಿಯಾಗಿದ್ದ ಅಥಣಿ ಪುರಸಭೆ ಅಧಿಕಾರಿಯನ್ನು ಅಮಾನತು ಮಾಡಿ ರಾಜ್ಯ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಪಿ ಎನ್ ರವೀಂದ್ರ  ಆದೇಶ ಹೊರಡಿಸಿದ್ದಾರೆ.

ಅಥಣಿಯ ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಮೇಲಾಧಿಕಾರಿಗಳ ಆದೇಶವನ್ನು ಗಾಳಿಗೆ ತೂರಿ  ಕರ್ತವ್ಯಲೋಪ  ಎಸಗಿದ್ದು, ಕೆಲವು ಪ್ರಕರಣಗಳಲ್ಲಿ  ತನಿಕಾ ತಂಡದವರಿಗೆ ಸರಿಯಾಗಿ ಸ್ಪಂದಿಸದೆ, ಯಾವುದೇ ದಾಖಲಾತಿಗಳನ್ನು ನೀಡದೆ ಬೇಜವಾಬ್ದಾರಿಯಾಗಿ ವರ್ತಿಸಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಿ, ಅವರನ್ನು ಅಮಾನತುಗೊಳಿಸಿ, ಅವರ ಮೂಲಸ್ಥಾನ  ಇಳಕಲ್ಲ ನಗರಸಭೆಯ  ಕಚೇರಿಯ ವ್ಯವಸ್ಥಾಪಕ ಹುದ್ದೆಗೆ ಬದಲಿಸಿ ಗುರುವಾರ ದಿ. 6 ರಂದು  ಮಧ್ಯಾಹ್ನದಿಂದಲೇ ಜಾರಿಗೆ ಬರುವಂತೆ  ರಾಜ್ಯ ಪೌರಾಡಳಿತ ಇಲಾಖೆಯ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.