Select Page

Advertisement

ನೇಕಾರರಿಗೆ ಸಿಹಿಸುದ್ದಿ :10 ಹೆಚ್.ಪಿ ವರೆಗೂ ಉಚಿತ ವಿದ್ಯುತ್ ಘೋಷಣೆ

ನೇಕಾರರಿಗೆ ಸಿಹಿಸುದ್ದಿ :10 ಹೆಚ್.ಪಿ ವರೆಗೂ ಉಚಿತ ವಿದ್ಯುತ್ ಘೋಷಣೆ

ವಿಜಯಪುರ : ಪ್ರಣಾಳಿಕೆಯಲ್ಲಿ ಹೇಳಿದಂತೆ ರಾಜ್ಯ ಸರ್ಕಾರದಿಂದ ರಾಜ್ಯದ ನೇಕಾರ ಬಂಧುಗಳ 10 ಹೆಚ್.ಪಿ ವರೆಗಿನ ಮಗ್ಗ ಮತ್ತು ಮಗ್ಗಪೂರ್ವ ಘಟಕಗಳಿಗೆ ರಾಜ್ಯ ಸರ್ಕಾರದಿಂದ ಮಾಸಿಕ ಗರಿಷ್ಠ 250 ಯೂನಿಟ್ ವರೆಗೂ ಉಚಿತ ವಿದ್ಯುತ್ ಘೋಷಿಸಲಾಗಿದ್ದು, ನಿನ್ನೇ ಈ ಬಗ್ಗೆ ಆದೇಶ ಹೊರಡಿಸಲಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದರು.

ವಿಜಯಪುರ ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಕುರಿತು‌ ಮಾಹಿತಿ ನೀಡಿದರು. ನೇಕಾರರಿಗೆ ರಾಜ್ಯ ಸರ್ಕಾರ ಕೊಟ್ಟ ಮಾತಿನಿಂದ ಆದೇಶ ಹೊರಡಿಸಿದ ಸಿಎಂ ಅವರಿಗೆ ಸಚಿವರು ಅಭಿನಂದನೆ ಸಲ್ಲಿಸಿದರು.

ಚುನಾವಣೆಯಲ್ಲಿ ಘೋಷಣೆ ಮಾಡಿದನ್ನು ಕಾರ್ಯರೂಪಕ್ಕೆ ತಂದಿದ್ದೇವೆ. 35 ರಿಂದ 40 ಸಾವಿರ ನೇಕಾರ ಕುಟುಂಬಗಳಿಗೆ ಇದರಿಂದ ಆರ್ಥಿಕವಾಗಿ ಸ್ವಾಲಂಭಿಗಳಾಗಲು ದೊಡ್ಡ ಅನುಕೂಲವಾಗಲಿದೆ.
ಇದಕ್ಕಾಗಿ ಅಂದಾಜು120 ರಿಂದ 140 ಕೋಟಿ ವೆಚ್ಚ ತಗಲುತ್ತದೆ ಎಂದರು.‌‌ ಇದೇ ವೇಳೆ ನವೆಂಬರ್ 20 ಕ್ಕೆ ರಾಜ್ಯ ಸಹಕಾರಿ ಸಪ್ತಾಹ ಜಿಲ್ಲಾ ಡಿಸಿಸಿ ಬ್ಯಾಂಕ್ ಸಹಯೋಗದೊಂದಿಗೆ ವಿಜಯಪುರದಲ್ಲೇ ನಡೆಸಲು ತಿರ್ಮಾನಿಸಲಾಗಿದೆ.

ಈ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯನವರು ಉದ್ಘಾಟನೆ ಮಾಡಲಿದ್ದುಕ್ಕೆ ಕಾರ್ಯಕ್ರಮದಲ್ಲಿ ಡಿಸಿಎಂ, ಸಹಕಾರಿ‌ ಸಚಿವರು ಸೇರಿ ಹಲವು ಸಚಿವರು, ಶಾಸಕರು, ಜನಪ್ರತಿನಿಧಿ, ಸಹಕಾರಿ ಧುರೀಣರು ಪಾಲ್ಗೊಳ್ಳಲಿದ್ದಾರೆ. ಕೆಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಪತ್ರದ ಮೂಲಕ ಆಹ್ವಾನಿಸಲಾಗಿದೆ.

ಕಾರ್ಯಕ್ರಮದಲ್ಲಿ ಸಹಕಾರಿ ರಂಗದಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಸಹಕಾರಿರತ್ನ ಪ್ರಶಸ್ತಿ ಸಹ ನೀಡಲಾಗುವುದು. ಅವಳಿ ಜಿಲ್ಲೆಯ ಸಹಕಾರಿ ರಂಗದ ಬಂಧುಗಳು ಸೇರಿದಂತೆ ರಾಜ್ಯದ ಎಲ್ಲಾ‌ ಸಹಕಾರಿಗಳು ಆಗಮಿಸಬೇಕೆಂದು ಇದೇ ವೇಳೆ ಆಹ್ವಾನಿಸಿದರು.

Advertisement

Leave a reply

Your email address will not be published. Required fields are marked *

error: Content is protected !!