ಸಿಎಂ ಹೆಂಡತಿ, ಸೊಸೆ ವೀಡಿಯೋ ಮಾಡಿದ್ರೆ ಮಕ್ಕಳಾಟವಾ ಎಂದವಳ ಬಂಧನ
ಬೆಂಗಳೂರು : ಕ್ಯಾಮರಾ ಇಟ್ಟು ಹಿಂದೂ ಯುವತಿಯರ ವೀಡಿಯೋ ಮಾಡಿದ್ದು ಮಕ್ಕಳಾಟವಾದರೆ, ಸಿಎಂ ಸಿದ್ದರಾಮಯ್ಯ ಅವರ ಹೆಂಡತಿ ಅಥವಾ ಸೊಸೆಯ ವೀಡಿಯೋ ಮಾಡಿದ್ದರೆ ಕಾಂಗ್ರೆಸ್ ಮಕ್ಕಳಾಟ ಎಂದು ಒಪ್ಪಿಕೊಳ್ಳುತ್ತದೆಯಾ ಎಂದು ಟ್ವೀಟ್ ಮಾಡಿದ್ದಳನ್ನು ಬಂಧಿಸಲಾಗಿದೆ.
ಬಿಜೆಪಿ ಕಾರ್ಯಕರ್ತೆ ಶಕುಂತಲಾ ಎಂಬುವವಳು ಉಡುಪಿ ಕಾಲೇಜಿನಲ್ಲಿ ನಡೆದ ಮೊಬೈಲ್ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಡಿದ್ದ ಟ್ವೀಟ್ ನಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ವಿರುದ್ದ ಅವಹೇಳನಕಾರಿ ಟ್ವೀಟ್ ಮಾಡಿದ್ದಳು.
ಈ ಅವಹೇಳನಕಾರಿ ಟ್ವೀಟ್ ಎಲ್ಲೆಡೆ ವೈರಲ್ ಆಗಿತ್ತು. ಹಾಗೂ ಸಿದ್ದರಾಮಯ್ಯ ಅವರ ಕುಟುಂಬದ ಕುರಿತು ಈ ರೀತಿಯ ಅವಹೇಳನಕಾರಿ ಟ್ವೀಟ್ ಮಾಡಿದ್ದನ್ನು ಖಂಡಿಸಲಾಗಿತ್ತು. ಸಧ್ಯ ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶಂಕುತಲಾ ಎಂಬುವವಳನ್ನು ಬಂಧಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಒಡಿಶಾದಲ್ಲಿ ನಡೆದ ರೈಲು ಅಪಘಾತದ ಸಂದರ್ಭದಲ್ಲಿ ಪಕ್ಕದಲ್ಲೇ ಮಸೀದಿ ಇದೆ ಎಂದು ಬಿಂಬಿಸಿ ಟ್ವೀಟ್ ಮಾಡಿದ್ದಳು. ನಂತರ ಒಡಿಶಾ ಪೊಲೀಸರು ಈ ಕುರಿತು ಟ್ವೀಟ್ ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದ್ದರು.

