ಎಲ್ಲವನ್ನೂ ಕೊಟ್ಟ ಪಕ್ಷಕ್ಕೆ ದ್ರೋಹ ಮಾಡಿದ್ದು ಯಾರು? ; ಸವದಿ ವಿರುದ್ಧ ಮೌನ ಮುರಿದ ಅಮಿತ್ ಶಾ
“ಸೋತ ನಂತರ ಡಿಸಿಎಂ ಹುದ್ದೆ ಕೊಟ್ಟಿದ್ದು ಅಷ್ಟೇ ಅಲ್ಲ. ಲಕ್ಷ್ಮಣ ಸವದಿಗೆ ಆರು ವರ್ಷ ಅವಧಿಯ ಎಂ ಎಲ್ ಸಿ ಕೂಡಾ ಮಾಡಲಾಗಿತ್ತು. ಇವರು ಮುಂಚಿತವಾಗೆ ನನಗೆ ಪರಿಷತ್ ಸದಸ್ಯ ಬೇಡ, 2023 ರ ಚುನಾವಣೆ ಎದುರಿಸುತ್ತೇನೆ ಎಂದು ಹೇಳಬೇಕಿತ್ತು. ಆದರೆ ಅವರು ಇನ್ನೂ ಐದು ವರ್ಷ ಅವಧಿಯ ಪರಿಷತ್ ಸ್ಥಾನ ಬಿಟ್ಟು ಬೇರೆಯವರ ಅವಕಾಶ ಕೇಳಿದ್ದು ಎಷ್ಟು ಸರಿ. ನಾವು ಎಲ್ಲವನ್ನೂ ಕೊಟ್ಟಿದ್ದರು ಮತ್ತೆ ಅನ್ಯಾಯದ ಮಾತನಾಡುವ ಅವರೇ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂದರು.”
ಬೆಂಗಳೂರು : ಅಥಣಿ ಬಿಜೆಪಿ ಟಿಕೆಟ್ ನಿರಾಕರಣೆ ಮಾಡಿದ್ದಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಲಕ್ಷಣ ಸವದಿ ವಿರುದ್ಧ ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ಕೊನೆಗೂ ಮೌನ ಮುರಿದಿದ್ದಾರೆ. ಲಕ್ಷಣ ಸವದಿಗೆ ಎಲ್ಲವನ್ನೂ ಕೊಟ್ಟ ಪಕ್ಷಕ್ಕೆ ದ್ರೋಹ ಎಸಗಿ ಹೋಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಹೌದು ರಾಜ್ಯ ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ರಾಜಕೀಯ ದಿಗ್ಗಜರು ಕರ್ನಾಟಕದಲ್ಲಿ ನೆಲೆಯೂರಿದ್ದಾರೆ. ಅದರಂತೆ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ಕೂಡ ಕರ್ನಾಟಕದಾದ್ಯಂತ ಸುತ್ತಾಡಿ ಚುನಾವಣಾ ಪ್ರಚಾರ ಸೇರಿದಂತೆ ಗೆಲುವಿನ ತಂತ್ರ ಹೆಣೆಯುತ್ತಿದ್ದಾರೆ. ಹಾಗೆಯೇ ಕನ್ನಡ ಸುದ್ದಿ ಮಾಧ್ಯಮಗಳ ಜೊತೆಗೂ ಚಾಣಕ್ಯ ಶಾ ಸಂವಾದ ನಡೆಸುತ್ತಿದ್ದಾರೆ.
ನಿನ್ನೆಯಷ್ಟೇ ಖಾಸಗಿ ಮಾದ್ಯಮ ಒಂದರಲ್ಲಿ ಮಾತನಾಡುತ್ತಾ ಅಮಿತ್ ಶಾ ಲಕ್ಷಣ ಸವದಿ ಹಾಗೂ ಜಗದೀಶ್ ಶೆಟ್ಟರ್ ಪಕ್ಷ ತೊರೆದಿದ್ದರ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇಲ್ಲಿ ಮಾಜಿ ಡಿಸಿಎಂ ಲಕ್ಷಣ ಸವದಿ ವಿರುದ್ಧವೂ ಶಾ ಗಂಭೀರ ಆರೋಪ ಮಾಡಿದ್ದಾರೆ. ನಾವು ಲಕ್ಷಣ ಸವದಿಯನ್ನು ಎಂಎಲ್ಸಿ ಮಾಡಿದ್ದೇವು. ಅದು ಇನ್ನೂ ಐದು ವರ್ಷದ ಅವಧಿ ಇತ್ತು. ಅದಾಗ್ಯೂ ಚುನಾವಣಾ ಟಿಕೆಟ್ ಕೇಳಿದರೆ ಹೇಗೆ. ಇರುವ ಅವಕಾಶ ಸದುಪಯೋಗ ಪಡೆಸಿಕೊಂಡಿದ್ದರೆ ಆಯ್ತು. ಅದು ಬಿಟ್ಟು ಬೇರೆಯವರ ಅವಕಾಶ ಕೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
“ಸೋತ ನಂತರ ಡಿಸಿಎಂ ಹುದ್ದೆ ಕೊಟ್ಟಿದ್ದು ಅಷ್ಟೇ ಅಲ್ಲ. ಲಕ್ಷ್ಮಣ ಸವದಿಗೆ ಆರು ವರ್ಷ ಅವಧಿಯ ಎಂ ಎಲ್ ಸಿ ಕೂಡಾ ಮಾಡಲಾಗಿತ್ತು. ಇವರು ಮುಂಚಿತವಾಗೆ ನನಗೆ ಪರಿಷತ್ ಸದಸ್ಯ ಬೇಡ, 2023 ರ ಚುನಾವಣೆ ಎದುರಿಸುತ್ತೇನೆ ಎಂದು ಹೇಳಬೇಕಿತ್ತು. ಆದರೆ ಅವರು ಇನ್ನೂ ಐದು ವರ್ಷ ಅವಧಿಯ ಪರಿಷತ್ ಸ್ಥಾನ ಬಿಟ್ಟು ಬೇರೆಯವರ ಅವಕಾಶ ಕೇಳಿದ್ದು ಎಷ್ಟು ಸರಿ. ನಾವು ಎಲ್ಲವನ್ನೂ ಕೊಟ್ಟಿದ್ದರು ಮತ್ತೆ ಅನ್ಯಾಯದ ಮಾತನಾಡುವ ಅವರೇ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂದರು.”
ಹೌದು ತಮ್ಮ ನೇರ ಮಾತುಗಳಿಂದ ಅಮಿತ್ ಶಾ ಎದುರಾಳಿಗೆ ಉತ್ತರ ಕೊಡುವುದರಲ್ಲಿ ಎತ್ತಿದ ಕೈ. ಕೊನೆಗೂ ಲಕ್ಷಣ ಸವದಿ ವಿರುದ್ಧ ಮೌನ ಮುರಿದು ಬಿಜೆಪಿಗೆ ಲಕ್ಷ್ಮಣ ಸವದಿ ಮಾಡಿದ ಅನ್ಯಾಯದ ಕುರಿತು ಬಿಚ್ಚಿಡುವ ಮೂಲಕ. ಈ ಬಾರಿ ಲಕ್ಷಣ ಸವದಿ ಹಾಗೂ ಜಗದೀಶ್ ಶೆಟ್ಟರ್ ಸೋಲಿ ಖಚಿತ ಎಂದು ಹೇಳಿದ್ದಾರೆ.