ಸಚಿವ ಸ್ಥಾನ ಪಡೆಯುವಾಗ ಇದೇ ಖಾತೆ ತಗೆದುಕೊ ; ಲಕ್ಷ್ಮಣ ಸವದಿಗೆ ಜೈನಮುನಿ ಸಲಹೆ..!
ಕಾಗವಾಡ : ಸಚಿವಸ್ಥಾನ ಪಡೆಯುವ ವೇಳೆ ಇದೇ ಖಾತೆಯನ್ನೇ ತಗೆದುಕೊಳ್ಳುವಂತೆ ಜೈನ ಸನ್ಯಾಸಿ ಲಕ್ಷ್ಮಣ ಸವದಿಗೆ ಸೂಚಿಸಿದ ಘಟನೆ ನಡೆದಿದೆ.
ಭಾನುವಾರ ಕಾಗವಾಡ ತಾಲೂಕಿನ ಐನಾಪೂರ ಗ್ರಾಮದಲ್ಲಿ ಜರುಗಿದ ಜೈನ ಸಮ್ಮೇಳನ ಸಂದರ್ಭದಲ್ಲಿ ರಾಷ್ಟ್ರಸಂತ ಶ್ರೀ ಗುಣಧರನಂದಿ ಮಹಾರಾಜರು ಶಾಸಕ ಲಕ್ಷ್ಮಣ ಸವದಿಗೆ ಅಪರೂಪದ ಬೇಡಿಕೆ ಇಡುವ ಮೂಲಕ ಗಮನಸೆಳೆದರು.
ಮುಂದಿನ ಬಾರಿ ಸಚಿವಸ್ಥಾನ ಪಡೆದುಕೊಳ್ಳುವ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಖಾತೆ ತಗೆದುಕೊಳ್ಳುವಂತೆ ಸಲಹೆ ನೀಡಿದರು. ಕಾಂಗ್ರೆಸ್ ಸರಕಾರದಲ್ಲಿ ಸಂಪುಟ ಪುನರ್ ರಚನೆ ಚರ್ಚೆ ಮಧ್ಯೆ ಲಕ್ಷ್ಮಣ ಸವದಿ ಅವರಿಗೆ ಶ್ರೀಗಳು ಹೇಳಿದ ಮಾತು ಚರ್ಚೆಗೆ ಗ್ರಾಸವಾಗಿದೆ.


