Select Page

Advertisement

ರಕ್ತದಾನ ಮಾಡುವದರಿಂದ ಒಂದು ಜೀವವನ್ನು ಉಳಿಸಿದ ಪುಣ್ಯ: ಡಾ. ಶೀಲವಂತರ

ರಕ್ತದಾನ ಮಾಡುವದರಿಂದ ಒಂದು ಜೀವವನ್ನು ಉಳಿಸಿದ ಪುಣ್ಯ: ಡಾ. ಶೀಲವಂತರ

ಬೆನಕಟ್ಟಿ: ಸಮೀಪದ ಮದ್ಲೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಆರೋಗ್ಯ ಕೇಂದ್ರ ಹಾಗೂ ಗ್ರಾಮ ಪಂಚಾಯತ ಆಶ್ರಯದಲ್ಲಿ ಸಯಂ ಪ್ರೇರಿರತ ರಕ್ತದಾನ ಶಿಬಿರ ಹಾಗೂ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮ ಜರುಗಿತು.

ಗ್ರಾಮ ಪಂಚಾಯತ್ ಪಿಡಿಒ ರಾಘವೇಂದ್ರ ಎಸ್. ಪಿ ಮಾತನಾಡಿ ಯುವಕರು ರಕ್ತದಾನ ಮಾಡುವದರಿಂದ ಉತ್ತಮ ಆರೋಗ್ಯವಂತರಾಗುತ್ತಾರೆ, ರಕ್ತದಾನ ಮಾಡಲು ಯುವಕರು ಮುಂದೆ ಬರಬೇಕು ಎಂದು ತಿಳಿಸಿದರು.

ಡಾ: ಮೇಘರಾಜ್ ಶೀಲವಂತರ ಮಾತನಾಡಿ ರಕ್ತದಾನ ಮಾಡುವುದರಿಂದ ಒಂದು ಜೀವವನ್ನು ಉಳಿಸಿದ ಪುಣ್ಯ ಬರುತ್ತದೆ, ಈ ನಿಟ್ಟಿನಲ್ಲಿ ಯುವಕರು ರಕ್ತದಾನ ಮಾಡಿ ಸಹಕರಿಸಿ ಎಂದು ಹೇಳಿದರು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಐ.ಆರ್. ಗಂಜಿ ಮಾತನಾಡಿ ಪ್ರತಿಯೊಬ್ಬರು ಮತದಾನವನ್ನು ಮಾಡಬೇಕು, ಮತದಾನದ ಕುರಿತು ಗ್ರಾಮಸ್ಥರಿಗೆ ತಿಳಿಸಿದರು,

ಮತದಾನ ಜಾಗೃತಿ ಅಭಿಯಾನ ಪ್ರತಿಜ್ಞಾವಿಧಿ ಬೋಧಿಸಿದರು.
ಬೆಳಗಾವಿ ಬೀಮ್ಸ್ ರಕ್ತ ಭಂಡಾರ ವೈದ್ಯಾಧಿಕಾರಿ ಡಾ: ಆರ್ ಜಿ. ಪಾಟೀಲ, ಡಾ: ನರಸರೆಡ್ಡಿ, ಡಾ: ಕಾರ್ತಿಕ ವಾಲಿ, ಡಾ: ಪ್ರಮೋದ ಸಿಂದಗಿ, ಡಾ: ವರ್ಷಾ ಮೊಳೇಕರ, ಹಣಮಂತ ಪಚ್ಚಿನ್ನವರ, ಮಂಜುನಾಥ ಜಡಗನ್ನವರ, ವಿಠ್ಠಲ ದಳವಾಯಿ, ಶಿಲ್ಪಾ ಕುರುಬಗಟ್ಟಿಮಠ, ಆಸ್ಮಾ ಮುಲ್ಲಾ, ಹಸನ ಮುಲ್ಲಾ, ಬಸವರಾಜ ಹೊಟ್ಟಿನ್ನವರ, ರೇವಣ್ಣ ಕುರಿ, ಬಾಳಪ್ಪ ಬೈಲವಾಡ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು

Advertisement

Leave a reply

Your email address will not be published. Required fields are marked *

error: Content is protected !!