ಬೆಳಗಾವಿ : ಇನ್ನೇನು ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಮ್ಮೆ, ನಾಯಿ ಸತ್ತರೂ ನನ್ನ ಮೇಲೆ ಹಾಕುತ್ತಾರೆ. ವಿರೋಧಿಗಳಿಗೆ ಇದೇ ಕೆಲಸ ಎಂದು ಸಚಿವ ಸತೀಶ್ ಜಾರಕಿಹೊಳಿ ಪ್ರತ್ಯುತ್ತರ ನೀಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಯಮಕನಮರಡಿಯ ಹುಣಸಿಕೊಳ್ಳಮಠದ ಶ್ರೀ ಸಿದ್ಧಬಸವ ಸ್ವಾಮೀಜಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಮುಖಂಡ ಮಾರುತಿ ಅಷ್ಟಗಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.

ವೈಯಕ್ತಿಕ ಸಮಸ್ಯೆಗೆ ಜಗಳ ಆಗಿದೆ. ಸ್ವಾಮೀಜಿ ಹೇಳಿಕೆ ಗಮನಿಸಲಾಗಿದೆ. ಮೂಲೆಯಲ್ಲಿ ನಾಯಿ ಸತ್ತರೂ ನನ್ನ ಮೇಲೆ ಹಾಕುತ್ತಾರೆ. ಅವರಿಗೆ ಇದೆ ಕೆಲಸ, ಚುನಾವಣೆ ಸಮೀಪಿಸುತ್ತಿದ್ದಂತೆ ಹೀಗೆಯೇ ಸುಳ್ಳು ಆರೋಪ ಮಾಡುತ್ತಾರೆ ಎಂದರು.