ಬೆಂಗಳೂರು : ರಾಜ್ಯ ಸರ್ಕಾರದ ಅತ್ಯಂತ ಜನಪ್ರಿಯ ‘ಗೃಹಜ್ಯೋತಿ’ (Gruhajyoti) ಯೋಜನೆಯಲ್ಲಿ ಸದ್ಯ ಮಹತ್ವದ ಪರಿಷ್ಕೃತ ಕಾರ್ಯ ಪ್ರಗತಿಯಲ್ಲಿದ್ದು, ಇದು ಗ್ರಾಹಕರ ಬಿಲ್ಲು ಹಾಗೂ ಕರೆಂಟ್ ಬಿಲ್ ಮೇಲೆ ಪ್ರಭಾವ ಬೀರಲಿದೆ.

ಹೊಸದಾಗಿ ಜಾರಿಗೆ ತರಲಾಗಿರುವ ಈ ಬದಲಾವಣೆಯ ಅನ್ವಯ, ಫಲಾನುಭವಿಗಳ ಉಚಿತ ವಿದ್ಯುತ್ ಸೌಲಭ್ಯವನ್ನು ನಿರ್ಣಯಿಸಲು ಕಳೆದ ಮೂರು ತಿಂಗಳ ಬಳಕೆಯ ಸರಾಸರಿ (Average) ಪ್ರಮಾಣವನ್ನು ಪರಿಗಣನೆಗೆ ತೆಗೆದುಕೊಳ್ಳ ಲಾಗುತ್ತದೆ.

ಯಾವ ಆಧಾರದ ಮೇಲೆ ಬಿಲ್?

ಇದರಿಂದಾಗಿ, ಈ ತಿಂಗಳ ಬಿಲ್ ಸಿದ್ಧಪಡಿಸುವಾಗ ಕಳೆದ ಜುಲೈ ತಿಂಗಳ ಮೀಟರ್ ರೀಡಿಂಗ್ ಒಂದನ್ನೇ ನಚ್ಚಿಕೊಳ್ಳದೆ, ಗ್ರಾಹಕರು ಹಿಂದಿನ ಮೂರು ತಿಂಗಳುಗಳಲ್ಲಿ ಎಷ್ಟು ಪ್ರಮಾಣದ ವಿದ್ಯುತ್ ಬಳಸಿದ್ದಾರೆ ಎಂಬ ಇತಿಹಾಸವನ್ನು ಆಧರಿಸಿ ಅಂತಿಮ ಲೆಕ್ಕಾಚಾರ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಗೃಹಜ್ಯೋತಿ ಫಲಾನುಭವಿಗಳ ಜಾತಿ ವಿವರ ಕಡ್ಡಾಯವಲ್ಲ!

‘ಗೃಹ ಜ್ಯೋತಿ’ (Gruhajyoti) ಯೋಜನೆಯ ಸಮೀಕ್ಷೆ ವೇಳೆ ಸಾವರ್ಜನಿಕರು ತಮ್ಮ ಜಾತಿ ಆಧಾರ ಪ್ರಮಾಣಪತ್ರದ ವಿವರಗಳನ್ನು ಹಂಚಿಕೊಳ್ಳುವುದು ಕಡ್ಡಾಯವಲ್ಲ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮಹತ್ವದ ಪ್ರಕಟಣೆ ಹೊರಡಿಸಿದೆ.

ಜುಲೈ 1 ರಿಂದ ರಾಜ್ಯಾದ್ಯಂತ ಮನೆ ಮನೆ ಮಾಹಿತಿಯ ಸಂಗ್ರಹಣೆ ಪ್ರಕ್ರಿಯೆ ಆರಂಭವಾಗಿದ್ದು, ಈ ಬಗ್ಗೆ ಇದ್ದಿದ್ದ ದೊಡ್ಡ ಗೊಂದಲಕ್ಕೆ ಅಧಿಕಾರಿಗಳು ಈಗ ಪೂರ್ಣವಿರಾಮ ಇಟ್ಟಿದ್ದಾರೆ.

ಸಾರ್ವಜನಿಕರ ಆತಂಕಕ್ಕೆ ಇಲಾಖೆಯ ಸ್ಪಷ್ಟನೆ :

ಸದ್ಯ ಮೀಟರ್ ರೀಡರ್‌ಗಳು ಹಾಗೂ ಬೆಸ್ಕಾಂ ಸಿಬ್ಬಂದಿ ಸೇವಾ ಸಿಂಧು ಆ್ಯಪ್ ಮತ್ತು ಮುದ್ರಿತ ಫಾರಂಗಳ ಮುಖಾಂತರ ಮನೆಗಳಿಗೆ ಭೇಟಿ ನೀಡಿ ಡೇಟಾ ಕಲೆಹಾಕುತ್ತಿದ್ದಾರೆ. ಆದರೆ, ಈ ಪ್ರಕ್ರಿಯೆಯಲ್ಲಿ ನಾಗರಿಕರ ಜಾತಿ ವಿವರ ಕೇಳುತ್ತಿರುವುದು ಸಾರ್ವಜನಿಕರ ಗಮನಕ್ಕೆ ಗುರಿಯಾಗಿದೆ.

ಮುಖ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ಈ ನಿಯಮದ ವಿರುದ್ಧ ಭಾರಿ ಚರ್ಚೆಗಳು ಮತ್ತು ಆಕ್ಷೇಪಗಳು ವ್ಯಕ್ತವಾಗಿದ್ದವು. ಈ ಪ್ರತಿರೋಧವನ್ನು ಗಮನಿಸಿದ ಬೆಸ್ಕಾಂ, ಜಾತಿ ಮತ್ತು ಪ್ರವರ್ಗದ ಮಾಹಿತಿ ಕೇವಲ ಐಚ್ಛಿಕ (Optional) ಮಾತ್ರವಾಗಿದ್ದು, ಅದನ್ನು ಹಂಚಿಕೊಳ್ಳುವುದು ಗ್ರಾಹಕರ ಸ್ವಯಂ ನಿರ್ಧಾರಕ್ಕೆ ಬಿಟ್ಟದ್ದಾಗಿದೆ ಎಂದು ಹೇಳಿದೆ.