Select Page

Advertisement

ಸಿಎಂ ಬದಲಾವಣೆ : ಸತೀಶ್ ಜಾರಕಿಹೊಳಿಗಿಂತ ನಾನೇ ಸೀನಿಯರ್ ; ಸಾಹುಕಾರ್ ಗೆ ಎಂ.ಬಿ ಪಾಟೀಲ್ ಟಾಂಗ್

ಸಿಎಂ ಬದಲಾವಣೆ : ಸತೀಶ್ ಜಾರಕಿಹೊಳಿಗಿಂತ ನಾನೇ ಸೀನಿಯರ್ ; ಸಾಹುಕಾರ್ ಗೆ ಎಂ.ಬಿ ಪಾಟೀಲ್ ಟಾಂಗ್

ವಿಜಯಪುರ : ನಾನು ಮತ್ತು ಡಿಕೆಶಿ ಸೀನಿಯರ್ ಇದ್ದೇವೆ. ಸತೀಶ ಜಾರಕಿಹೊಳಿಗಿಂತ ನಾನು ಸೀನಿಯರ್. ಪರಮೇಶ್ವರ್ ಅವರು ನಾವೆಲ್ಲ ಒಂದೇ ಹಂತದಲ್ಲಿದ್ದೇವೆ ಎಂದು ಸಚಿವ ಎಂ.ಬಿ ಪಾಟೀಲ್ ಪರೋಕ್ಷವಾಗಿ ಸತೀಶ್ ಜಾರಕಿಹೊಳಿಗೆ ಟಾಂಗ್ ನೀಡಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಇವರು. ಕಳೆದ 35 ವರ್ಷಗಳಿಂದ ಕಾಂಗ್ರೆಸ್ ನಲ್ಲಿ ದುಡಿಯುತ್ತಿದ್ದೇವೆ. ಸಚಿವ ಸತೀಶ್ ಜಾರಕಿಹೊಳಿಗಿಂತ ನಾನೇ ಸಿಎಂ, ನಮಗಿಂತ ಮೇಲಿನ‌ ಹಂತದ ಸೀನಿಯರ್ ಮಲ್ಲಿಕಾರ್ಜುನ ಖರ್ಗೆ ಅವರಿದ್ದಾರೆ. ಸಿದ್ದರಾಮಯ್ಯ, ಆರ್ ವಿ ದೇಶಪಾಂಡೆ ಅವರಿದ್ದಾರೆ ಎಂದು ಎಂ ಬಿ ಪಾಟೀಲ್‌ ಹೇಳಿದರು.

ಕಾಂಗ್ರೆಸ್ ನಲ್ಲಿ ಸಿಎಂ ಹುದ್ದೆ ಬದಲಾವಣೆ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿವೆ. ಈ ಮಧ್ಯೆ ಹಿರಿಯ ಸಚಿವರು ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದು ವಿಭಿನ್ನ ಹೇಳಿಕೆ ನೀಡುತ್ತಿದ್ದಾರೆ. ಈ ಹಿಂದೆ ಆರ್.ವಿ ದೇಶಪಾಂಡೆ ಸಿಎಂ ಆಸೆ ಕುರಿತು ಹೇಳಿಕೆ ನೀಡಿದ್ದರು.

ಎಂ.ಬಿ ಪಾಟೀಲ್ ಗೆ ಸಾಹುಕಾರ್ ಟಾಂಗ್…!

ಸಧ್ಯಕ್ಕೆ ಸಿಎಂ ಆಗುವ ಕುರಿತು ಅಗತ್ಯ ತಯಾರಿ ಮಾಡುತ್ತಿರುವುದು ಈ ಬಾರಿ ಸಿಎಂ ಆಗುವ ಉದ್ದೇಶದಿಂದಲ್ಲ, ಬರುವ 2028 ಕ್ಕೆ ತಯಾರಿ ನಡೆಸುತ್ತಿದ್ದು ಅಲ್ಲಿಯವರೆಗೆ ಅಭಿಮಾನಿಗಳು ಸಮಾಧಾನದಿಂದ ಕಾಯಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.

ಭಾನುವಾರ ಬೆಳಗಾವಿ ನಗರದಲ್ಲಿ ಸಿಎಂ ಸ್ಥಾನದ ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಇವರು‌, ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಸದ್ಯ ನಾನು ಸಿಎಂ ಸ್ಥಾನದ ರೇಸ್‌ನಲ್ಲಿ ಇಲ್ಲ. ನಾನು ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯೂ ಅಲ್ಲ ಎಂದರು.

ಈಗಲೇ ಅನೇಕರು ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಗುದ್ದಾಟ, ಕುಸ್ತಿ ಮಾಡುವ ಅವಶ್ಯಕತೆ ಇಲ್ಲ. ರಾಜ್ಯದಲ್ಲಿ ಅಂತಹ ಯಾವುದೇ ಸನ್ನಿವೇಶವೂ ಇಲ್ಲವೇ ಇಲ್ಲ. ನಾನಂತೂ ಈಗಾಗಲೇ ಸಿದ್ದರಾಮಯ್ಯನವರಿಗೆ ಬೆಂಬಲ ನೀಡಿದ್ದೇನೆ ಎಂದು ಸತೀಶ್‌ ಅವರು ಹೇಳಿದ್ದಾರೆ.

ಮುಂದಿನ ಸಿಎಂ ಸತೀಶ್ ಜಾರಕಿಹೊಳಿ‌ ಅಂಬ ಅಭಿಯಾನ ವಿಚಾರಕ್ಕೆ ಉತ್ತರಿಸಿದ ಅವರು, ಯಾರೋ ಒಬ್ಬರು ನಾನು ಸಿಎಂ ಹಾಕಿದರೆ ರಾಜ್ಯದ ಅಭಿಪ್ರಾಯ ಆಗಲ್ಲ. ಎಲ್ಲ ಕಡೆ ಆರಂಭವಾಗಿದ್ದಾಗ ನಮ್ಮವರು ಹಾಕಿದ್ದಾರೆ. ರಾಜ್ಯದಲ್ಲಿ ಅಂತಹ ಸನ್ನಿವೇಶ ಇಲ್ಲ. ಸಿಎಂ ಸಿದ್ದರಾಮಯ್ಯ ಮುಂದುವರೆಯುತ್ತಾರೆ ಎನ್ನುವ ನಂಬಿಕೆ ಇದೆ ಎಂದರು.

ದೆಹಲಿಗೆ ಬೇರೆ ಕೆಲಸ ಇರುತ್ತೆ ಹೋಗಿರುತ್ತೇವೆ. ಎಂ ಬಿ ಪಾಟೀಲ್, ಶಿವಾನಂದ, ದೇಶಪಾಂಡೆ ಅನೇಕರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಸಿದ್ದರಾಮಯ್ಯ ಪರ ನ್ಯಾಯ ಸಿಗುತ್ತೆ ಎನ್ನುವ ನಂಬಿಕೆ ಇದೆ. ಸಿಎಂ ಬದಲಾವಣೆ ಪ್ರಶ್ನೆ ಬರಲ್ಲ ಎನ್ನುವ ವಿಶ್ವಾಸ ಇದೆ. ಈಗ ನಾನು ಸಿಎಂ ಕನಸು ಕಂಡಿಲ್ಲ.
2028 ಕ್ಕೆ ಸಿಎಂ ಆಗುವ ತಯಾರಿ ಇದೆ, ಅಲ್ಲಿಯವರೆಗೆ ಅಭಿಮಾನಿಗಳು ಕಾಯಬೇಕು ಎಂದರು.

Advertisement

Leave a reply

Your email address will not be published. Required fields are marked *

error: Content is protected !!