Select Page

Advertisement

ಡಿಕೆಶಿ ಭೇಟಿಯಾದ ಸಾಹುಕಾರ್ ಸತೀಶ್ ; ಕಾಂಗ್ರೆಸ್ ನಲ್ಲಿ ನಡೆಯುತ್ತಾ ಮಹತ್ವದ ಬೆಳವಣಿಗೆ…?

ಡಿಕೆಶಿ ಭೇಟಿಯಾದ ಸಾಹುಕಾರ್ ಸತೀಶ್ ; ಕಾಂಗ್ರೆಸ್ ನಲ್ಲಿ ನಡೆಯುತ್ತಾ ಮಹತ್ವದ ಬೆಳವಣಿಗೆ…?

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಇಬ್ಬರು ಪ್ರತಿಷ್ಠಿತ ನಾಯಕರು ಒಂದುಗೂಡಿ ಸಭೆ ನಡೆಸಿದ್ದಾರೆ ಎಂದರು ಏನೋ ಒಂದು ಮಹತ್ವದ ವಿಷಯ ಇದ್ದೇ ಇರುತ್ತದೆ. ಅದರಂತೆ ಸೋಮವಾರ ಡಿಕೆಶಿ ಭೇಟಿಯಾಗುವ ಮೂಲಕ ಸಚಿವ ಸತೀಶ್ ಜಸರಕಿಹೊಳಿ ಕುತೂಹಲ ಮೂಡಿಸಿದ್ದಾರೆ.

ಹೌದು ಸಿದ್ದರಾಮಯ್ಯ ಸಂಪುಟದಲ್ಲಿ ಇಬ್ಬರೂ ಸಚಿವರು ಮಹತ್ವದ ಖಾತೆ ಹೊಂದಿದವರೇ. ಆದರೆ ಸಧ್ಯ ಮುಡಾ ಸಂಕಷ್ಟಕ್ಕೆ ಸಿಲುಕಿರುವ ಸಿದ್ದರಾಮಯ್ಯ ಅವರಿಗೆ ಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದ್ದರು ಮುಂದೆ ಪ್ರಕರಣ ಯಾವ ಹಾದಿಯನ್ನಾದರೂ ತಿಳಿಯಬಹುದು. ಇದೇ ಕಾರಣಕ್ಕೆ ಈ ಇಬ್ಬರು ನಾಯಕರ ಭೇಟಿ ಮಹತ್ವ ಪಡೆದುಕೊಂಡಿದೆ.

ಸಿಎಂ ಬದಲಾವಣೆ ಹಾಗೂ ಡಿಸಿಎಂ ಹುದ್ದೆ ಸೃಷ್ಟಿ ಕುರಿತು ಆಗಾಗ್ಗೆ ಹೇಳಿಕೆ ನೀಡುವ ಸಚಿವ ಸತೀಶ್ ಜಾರಕಿಹೊಳಿ‌‌ ಮುಂದಿನ ಐದು ವರ್ಷಗಳ ಅವಧಿಗೆ ಸಿದ್ದರಾಮಯ್ಯ ಅವರೇ ಸಿಎಂ ಎಂಬ ವಾದವನ್ನು ಮುಂದಿಡುತ್ತಾರೆ. ಆದರೆ ಸಿಎಂ ಹುದ್ದೆ ಮೇಲೆ‌ ಕಣ್ಣಿಟ್ಟಿರುವ ಡಿಕೆಶಿಗೆ ಇದು ಕೊಂಚ ಅಡಚಣೆ ಆಗುವುದರಲ್ಲಿ ಅನುಮಾನವಿಲ್ಲ.

ಆದರೆ ಸತೀಶ್ ಜಾರಕಿಹೊಳಿ ಅವರ ಈ ಎಲ್ಲಾ ಹೇಳಿಕೆಗಳನ್ನು ಪಕ್ಕಕ್ಕಿಟ್ಟು ಇಂದಿನ ಇಬ್ಬರು ನಾಯಕರ ಭೇಟಿ ರಾಜಕೀಯ ಮಹತ್ವ ಪಡೆದುಕೊಂಡಿದೆ. ಮುಂಬರುವ ದಿನಗಳಲ್ಲಿ ಆಗಬಹುದಾದ ಮಹತ್ವದ ಬೆಳವಣಿಗೆಗೆ ಈ ಭೇಟಿ ಸಾಕ್ಷಿ ಆಗುವ ಲಕ್ಷಣಗಳು ಇವೆ.

Advertisement

Leave a reply

Your email address will not be published. Required fields are marked *

error: Content is protected !!