ಸದಲಗಾ : ಸಿಲಿಂಡರ್ ಸ್ಪೋಟ ; ಓರ್ವ ವ್ಯಕ್ತಿ ಸಾವು
ಚಿಕ್ಕೋಡಿ : ಮನೆಯಲ್ಲಿ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಓರ್ವ ಸಾವಣಪ್ಪಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾದ ಘಟನೆ ಸಂಭವಿಸಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ಘಟನೆ ಸಂಭವಿಸಿದ್ದು, ಕೂಲಿ ಕೆಲಸಕ್ಕೆ ಬಂದಿದ್ದ ಮಹಾರಾಷ್ಟ್ರದ ಬೀಡ್ ಮೂಲದ ಸೂರ್ಯಕಾಂತ ಸೆಳಕೆ(55) ಮೃತ ದುರ್ದೈವಿ.
ಮತ್ತೋರ್ವ ಕಾರ್ಮಿಕ ಜ್ಞಾನೋದಯಗೆ ಗಂಭೀರವಾಗಿ ಗಾಯ ಚಿಕ್ಕೋಡಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ. ಸಿಲಿಂಡರ್ ಸ್ಪೋಟದ ತೀವ್ರತೆಗೆ ಪಕ್ಕದ ಮನೆಯ ಗೋಡೆ ಕುಸಿತವಾಗಿದೆ.
ಗೋಡೆ ಮಕ್ಕಳಿಬ್ಬರ ಮೇಲೆ ಬಿದ್ದು ಇಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿದೆ.
ಸ್ಥಳೀಯ ಆಸ್ಪತ್ರೆಯಲ್ಲಿ ಎರಡು ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.


