Select Page

Advertisement

RCB ಗೆದ್ದ ಟ್ರೋಫಿ ಹಿಂಪಡೆದ ಬಿಸಿಸಿಐ….?

RCB ಗೆದ್ದ ಟ್ರೋಫಿ ಹಿಂಪಡೆದ ಬಿಸಿಸಿಐ….?

ಬೆಂಗಳೂರು : 17 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು 18ನೇ ಆವೃತ್ತಿಯಲ್ಲಿ ಐಪಿಎಲ್ ಕಪ್‌ ಗೆದ್ದಿದೆ. ಆದರೆ, ಆರ್‌ಸಿಬಿಯ ಟ್ರೋಫಿಯನ್ನು ಬಿಸಿಸಿಐ ಹಿಂಪಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅಹಮದಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ 2025 ಫೈನಲ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ಗೆ ಸೋಲುಣಿಸುವ ಮೂಲಕ ಟ್ರೋಫಿ ಮುಡಿಗೇರಿಸಿಕೊಂಡು ಚಾಂಪಿಯನ್‌ ಆಯಿತು. ಈ ಮೂಲಕ 17 ವರ್ಷದ ವನವಾಸಕ್ಕೆ ಮುಕ್ತಿ ಸಿಕ್ಕಂತಾಗಿದೆ.

ಆರ್‌ಸಿಬಿಯು 17 ವರ್ಷಗಳ ಬಳಿಕ ಗೆದ್ದುಕೊಂಡಿದ್ದ ಟ್ರೊಫಿಯನ್ನು ಬಿಸಿಸಿಐ ಹಿಂಪಡೆದುಕೊಂಡಿದೆ. ಇದು ಇದೇ ಮೊದಲೇನಲ್ಲ. ಈ ಹಿಂದೆ ಗೆದ್ದಿರುವ ತಂಡಗಳ ಬಳಿಯಿದ್ದ ಟ್ರೋಫಿಯನ್ನು ಸಹ ಹಿಂಪಡೆದುಕೊಂಡಿದೆ.

ಬಿಸಿಸಿಐ ನಿಯಮದ ಪ್ರಕಾರ, ಯಾವುದೇ ತಂಡಗಳು ಟ್ರೋಫಿಯನ್ನು ಗೆದ್ರೂ ಅದನ್ನು ಹಿಂಪಡೆಯಲಾಗುದೆ. ಬಳಿಕ ಅದೇ ಮಾದರಿಯದ್ದೇ ರಿಪ್ಲಿಕಾ ಕಪ್‌ ತಂಡಗಳಿಗೆ ನೀಡಲಾಗುತ್ತದೆ.

Advertisement

Leave a reply

Your email address will not be published. Required fields are marked *

error: Content is protected !!