Select Page

Advertisement

ರಾಯಬಾಗ : ಮೊಮ್ಮಗನಿಗೆ ಬಾರ್ ನಲ್ಲಿ ಎಣ್ಣೆ ಕುಡಿಸಿದ ಅಜ್ಜ…Video ವೈರಲ್

ರಾಯಬಾಗ : ಮೊಮ್ಮಗನಿಗೆ ಬಾರ್ ನಲ್ಲಿ ಎಣ್ಣೆ ಕುಡಿಸಿದ ಅಜ್ಜ…Video ವೈರಲ್



ಬೆಳಗಾವಿ : ತನ್ನ ಮೊಮ್ಮಗನನ್ನು ಬಾರ್ ಗೆ ಕರೆದೊಯ್ದು ಎಣ್ಣೆ ಹೊಡೆಸಿರುವ ಕೃತ್ಯ ಬೆಳಗಾವಿ ಜಿಲ್ಲೆ ರಾಯಬಾಗ ಪಟ್ಟಣದ ಬಾರ್ ಒಂದರಲ್ಲಿ ನಡೆದಿದೆ.‌

ಚಿಕ್ಕ ಮಗುವಿನ್ನು ಬಾರ್ ನಲ್ಲಿ ಕರೆದೊಯ್ದು ತಾನು ಗ್ಲಾಸ್ ನಲ್ಲಿ ಎಣ್ಣೆ ಹಾಕಿಕೊಂಡಿದ್ದಾನೆ. ಪಕ್ಕದಲ್ಲೇ ಕುಂತಿದ್ದ ಮೊಮ್ಮಗನಿಗೂ ಮತ್ತೊಂದು ಗ್ಲಾಸ್ ನಲ್ಲಿ ಎಣ್ಣೆ ಹಾಕಿ ಕೊಟ್ಟಿದ್ದಾನೆ.‌

ಸ್ಥಳೀಯರು ಬೇಡ ಎಂದರೂ ಕೇಳದ ತಾತ ಹಿಂತಹ ಹೀನ ಕೃತ್ಯ ಎಸಗಿದ್ದಾನೆ. ಸಧ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷಯ ವೈರಲ್ ಆಗುತ್ತಿದ್ದು ಎಲ್ಲೆಡೆ ಅಜ್ಜನ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಘಟನೆ ನಡೆದು ಮೂರು ದಿನ ಕಳೆದರು ಆರೋಪಿ ವಿರುದ್ಧ ಈವರೆಗೂ ಯಾವುದೇ ಕ್ರಮ ಆಗಿಲ್ಲ. ಇನ್ನೂ ಬಾರ್ ನಲ್ಲಿ ಮಕ್ಕಳಿಗೆ ಅವಕಾಶ ನೀಡಿದ್ದರ ಕುರಿತು ಅಬಕಾರಿ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ವಿಪರ್ಯಾಸ.

Advertisement

Leave a reply

Your email address will not be published. Required fields are marked *

error: Content is protected !!