ಜಂಗಿ ನಿಕಾಲಿ ಮಾಡಿ ನಕ್ಕೊಂತ ಕುಂತರು ನೋಡ್ರಿ…!
ಬೆಳಗಾವಿ : ಕಳೆದ ಎರಡು ದಿನಗಳ ಹಿಂದೆ ಆರೋಪ, ಪ್ರತ್ಯಾರೋಪಗಳ ಮೂಲಕ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಇಬ್ಬರು ನಾಕರು ಇಂದು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.
ಹೌದು ಮೊನ್ನೆಯಷ್ಟೇ ಜಾರಕಿಹೊಳಿ ಹಾಗೂ ಜೊಲ್ಲೆ ಕುಟುಂಬದ ವಿರುದ್ಧ ಮಾಜಿ ಸಂಸದ ರಮೇಶ್ ಕತ್ತಿ ವಾಗ್ದಾಳಿ ನಡೆಸಿದ್ದರು. ಬೃಹತ್ ಸಮಾವೇಶ ನಡೆಸಿ ಮುಂಬರುವ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರ ಗದ್ದುಗೆ ಹಿಡಿಯುವ ಕುರಿತು ಮಾತನಾಡಿದ್ದರು.
ರಮೇಶ್ ಕತ್ತಿ ಹೇಳಿಕೆಗೆ ತಿರುಗೇಟು ನೀಡಿದ್ದ ಸಚಿವ ಸತೀಶ್ ಜಾರಕಿಹೊಳಿ ಯಾರು ಏನೇ ಮಾಡಿದರು ನಾವು ಒಗ್ಗಟ್ಟಾಗಿ ಎದುರಿಸುತ್ತೇವೆ. ಚುನಾವಣೆ ಬರಲಿ ತಕ್ಕ ಉತ್ತರ ನೀಡುತ್ತೆವೆ ಎಂಬ ಅರ್ಥದಲ್ಲಿ ಕತ್ತಿ ಹೇಳಿಕೆಗೆ ಟಾಂಗ್ ನೀಡಿದ್ದರು.
ಈ ಎಲ್ಲಾ ಬೆಳವಣಿಗೆ ನಂತರ ಸೋಮವಾರ ಹಾರೂಗೇರಿ ಪಟ್ಟಣದಲ್ಲಿ ನಡೆದ ದಕ್ಷಿಣ ಭಾರತ 103ನೇ ತ್ರೈಮಾಸಿಕ ಜೈನ ಸಮಾವೇಶ ವೇದಿಕೆಯಲ್ಲಿ ಇಬ್ಬರೂ ನಾಯಕರು ಒಂದಾದರು. ಅಕ್ಕ ಪಕ್ಕ ಕುಳಿತ ರಮೇಶ್ ಕತ್ತಿ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಉಭಯ ಕುಶಲೋಪರಿ ಹಂಚಿಕೊಂಡರು.
ಇದಾದ ನಂತರ ಪರಸ್ಪರ ಹೆಚ್ಚಿಗೆ ಮಾತನಾಡದೆ ಇಬ್ಬರೂ ನಾಯಕರು ಬೇರೆ, ಬೇರೆ ಯಾದರು. ಒಟ್ಟಿನಲ್ಲಿ ಮಾತಿನ ಸಮರ ಸಾರಿದ್ದ ನಾಯಕರು ಇಂದು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.


