Select Page

Advertisement

ಮದುವೆ ಮನೆಯಲ್ಲಿ ಪರಿಸರ ಜಾಗೃತಿ ಮೂಡಿಸಿದ ಅರಭಾವಿ ಕುಟುಂಬ

ಮದುವೆ ಮನೆಯಲ್ಲಿ ಪರಿಸರ ಜಾಗೃತಿ ಮೂಡಿಸಿದ ಅರಭಾವಿ ಕುಟುಂಬ

ಮುಗಳಖೋಡ : ಪಟ್ಟಣದ ಕರಿಸಿದ್ದೇಶ್ವರ ದೇವಾಲಯದಲ್ಲಿ ನಡೆದ ಸಮಾರಂಭದಲ್ಲಿ ಮದುವೆಗೆ ಬಂದ ಅತಿಥಿಗಳಿಗೆ ಮಧುಮಕ್ಕಳೇ ಉಡುಗೊರೆಯಾಗಿ ಸಸಿ ವಿತರಿಸುವ ಮೂಲಕ ವಿನೂತನ ಆಚರಣೆ ನಡೆಯಿತು.

ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ಭಾನುವಾರ ಸಂತೋಷ್ ಹಾಗೂ ಸೌಮ್ಯ ರವರ ಮದುವೆ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಮದುವೆಗೆ ಆಗಮಿಸಿದ ಬಂಧುಗಳಿಗೆ ನವಜೋಡಿಗಳು ಸಸಿ ವಿತರಿಸುವ ಮೂಲಕ‌ ಪರಿಸರ ಜಾಗೃತಿ ಮೂಡಿಸಿದರು.‌

ಸಸಿ ನೆಟ್ಟು ಪೋಷಿಸಿ ಅದುವೇ ತಾವು ನವದಂಪತಿಗಳಿಗೆ ಮಾಡುವ ಆಶಿರ್ವಾದ ಎಂಬ ಪರಿಸರ ಉಳಿಸುವ ನಿಟ್ಟಿನಲ್ಲಿ ವಿನೂತನ ಆಚರಣೆ ಮೂಲಕ ನವದಂಪತಿಗಳು ಗಮನಸೆಳೆದರು. ಈ ಸಂದರ್ಭದಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ಹಣ್ಣಿನ ಸಸಿಗಳನ್ನು ವಿತರಣೆ ಮಾಡಲಾಯಿತು.

Advertisement

Leave a reply

Your email address will not be published. Required fields are marked *

error: Content is protected !!