ಹೊರಗಿನಿಂದ ಬಂದು ಹೊಲಸು ಮಾಡುತ್ತಿದ್ದಾರೆ ; ಗುಡುಗಿದ ಕತ್ತಿ ಸಾಹುಕಾರ್….!
ಬೆಳಗಾವಿ : ಹುಕ್ಕೇರಿ ಕ್ಷೇತ್ರ ಸ್ವಚ್ಛವಾಗಿದೆ. ಹೊರಗಿನವರು ಬಂದು ಹೊಲಸು ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಮಾಜಿ ಸಂಸದ ರಮೇಶ್ ಕತ್ತಿ ಜಾರಕಿಹೊಳಿ ಸಹೋದರರ ವಿರುದ್ಧ ಗುಡುಗಿದ್ದಾರೆ.
ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನಲೆಯಲ್ಲಿ ಪಿಕೆಪಿಎಸ್ ಪದಾಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿದ ಇವರು. ಬೇರೆ ತಾಲೂಕಿನವರು ಬಂದು ಹೊಲಸು ಮಾಡುತ್ತಿದ್ದು, ಇದಕ್ಕೆ ಜನ ಬೆಂಬಲಿಸಬಾರದು. ಚುನಾವಣೆ ಮುಗಿಯುವ ವರೆಗೂ ಎಚ್ಚರವಾಗಿರಬೇಕೆಂದು ಹೇಳಿದರು.
ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘ ಹಾಗೂ ಡಿಸಿಸಿ ಬ್ಯಾಂಕ್ ಚುನಾವಣೆ ದಿನಾಂಕ ನಿಗಧಿಯಾಗಿದ್ದು ಈಗಾಗಲೇ ನಾಯಕರ ನಡುವಿನ ಆರೋಪ, ಪ್ರತ್ಯಾರೋಪ ಜೋರಾಗಿವೆ. ಈ ಮಧ್ಯೆ ಜಾರಕಿಹೊಳಿ ಸಹೋದರರ ವಿರುದ್ಧ ಕತ್ತಿ ಸಾಹುಕಾರ್ ಗುಡುಗುತ್ತಿದ್ದಾರೆ.


