ಸವದಿಯನ್ನು ಮುಗಿಸಿ ಉಗಾರ ಸಕ್ಕರೆ ಕಾರ್ಖಾನೆಗೆ ಕಬ್ಬು ಕಡಿಯಲು ಕಳುಹಿಸುವೆ : ಸಾಹುಕಾರ್ ಗುಡುಗು
ಬೆಳಗಾವಿ : ಅಥಣಿ ಚುನಾವಣಾ ಅಖಾಡದಲ್ಲಿ ಇಬ್ಬರು ಸಾಹುಕಾರ್ ಮಧ್ಯೆ ಮಾತಿನ ವಾಗ್ವಾದ ಜೋರಾಗಿದ್ದು ಲಕ್ಷ್ಮಣ ಸವದಿ ವಿರುದ್ಧ ರಮೇಶ್ ಜಾರಕಿಹೊಳಿ ಆಕ್ರೋಶ ಹೊರ ಹಾಕಿದ್ದಾರೆ.
ಕಾಗವಾಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಮಾತನಾಡಿ. ಲಕ್ಷಣ ಸವದಿ ಒಬ್ಬ ಮೋಸಗಾರ. ಆತನನ್ನು ಈ ಬಾರಿ ಸೋಲಿಸಿ ಬಿಜೆಪಿ ಗೆಲ್ಲಿಸುವ ನಿರ್ಧಾರ ಜನ ಮಾಡಬೇಕು.
ನಮ್ಮ ತ್ಯಾಗದಿಂದ ಸವದಿ ಮಂತ್ರಿ ಆಗಿದ್ದು. ಆತ ಮಾಡಿರುವ ಹಣ ನಮ್ಮದು ಜನ ಅವರು ಕೊಡುವ ಹಣ ತಗೆದುಕೊಳ್ಳಿ ಆದರೆ ತಮ್ಮ ಮತ ಬಿಜೆಪಿಗೆ ಹಾಕುವುದನ್ನು ಮರೆಯಬೇಡಿ. ಸವದಿಗೆ ಕೊನೆಯಲ್ಲಿ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿದೆ. ಆದರೆ ಮಂತ್ರಿ ಪದವಿ ಇದ್ದಾಗ ಸ್ವಾಭಿಮಾನ ಇರಲಿಲ್ಲ. ಆತ ಗಂಡಸಾಗಿದ್ದರೆ ನಾವು ಬಿಜೆಪಿ ಸೇರಿದ್ದಾಗಲೇ ಮಂತ್ರಿ ಆಗಲ್ಲ ಎಂದು ಹೇಳಿದ್ದರೆ ಆತನನ್ನು ನಂಬಬಹುದಾಗಿತ್ತು ಎಂದರು.
ಸವದಿ ಓಡಿ ಹೋಗಿ ಮಂತ್ರಿ ಆಗಿದ್ದಾನೆ. ಆದೆ ಕೊನೆಗೆ ಚುನಾವಣೆ ಬಂದಾಗ ಸ್ವಾಭಿಮಾನದ ಮಾತು ಆಡುತ್ತಾನೆ.ಆತ ಬೋಗಸ್ ಸ್ವಾಭಿಮಾನಿ ಆತನನ್ನು ನಂಬಬೇಡಿ. ಮಹೇಶ್ ಕುಮಠಳ್ಳಿ ಒಳ್ಳೆಯ ರಾಜಕಾರಣಿ ಇವರನ್ನು ಕಳೆದುಕೊಳ್ಳಬೇಡಿ. ಸವದಿಯನ್ನು ಸೋಲಿಸಿ ಉಗಾರ ಕಾರ್ಖಾನೆಗೆ ಕಬ್ಬು ಕಡಿಯಲು ಕಳುಹಿಸುವೆ ಎಂದರು.


