Select Page

Advertisement

ಜೊಲ್ಲೆ, ಜಾರಕಿಹೊಳಿ ವಿರುದ್ಧ ಸೆಡ್ಡು ಹೊಡೆದ ಕತ್ತಿ ಸಾಹುಕಾರ್ ; ತಕ್ಕ ಉತ್ತರ ಕೊಡುವೆ ಎಂದು ಸವಾಲ್

ಜೊಲ್ಲೆ, ಜಾರಕಿಹೊಳಿ ವಿರುದ್ಧ ಸೆಡ್ಡು ಹೊಡೆದ ಕತ್ತಿ ಸಾಹುಕಾರ್ ; ತಕ್ಕ ಉತ್ತರ ಕೊಡುವೆ ಎಂದು ಸವಾಲ್

ಚಿಕ್ಕೋಡಿ : ಹುಕ್ಕೇರಿ‌ ಮತಕ್ಷೇತ್ರದಲ್ಲಿ ಹೊರಗಿನವರಿಗೆ ಅಧಿಕಾರ ‌ಮಾಡಲು ಬಿಡುವುದಿಲ್ಲ. ನಮ್ಮ‌ ಬೆನ್ನಿಗೆ ಕಾರ್ಯಕರ್ತರ ಶಕ್ತಿ ಇದೆ, ಹೊರಗನವರು ಬರದಂತೆ ನೋಡಿಕೊಳ್ಳುತ್ತೇವೆ ಎಂದು ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಹಾಗೂ ಜಾರಕಿಹೊಳಿ ಸಹೋದರರಿಗೆ ಮಾಜಿ ಸಂಸದ ರಮೇಶ್ ಕತ್ತಿ ಬಹಿರಂಗ ಸವಾಲು ಹಾಕಿದರು.

ಶುಕ್ರವಾರ ಹುಕ್ಕೇರಿ ಪಟ್ಟಣದಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನ ಮಾಡಿ ಮಾತನಾಡಿದ ಅವರು ನಾನು ಹಾಗೂ ನಿಖೀಲ ಕತ್ತಿ ಸ್ವಚ್ಚಂದವಾಗಿದ್ದೇವೆ. ನಿಮ್ಮ ಮನೆ ಸೇವೆ ಮಾಡಲು ಗಟ್ಟಿ ಇದ್ದೇವೆ.

ಹೊರಗಿನವರು ನಮ್ಮ ಕ್ಷೇತ್ರಕ್ಕೆ ಬರುವುದು ಬೇಡ. ನಮ್ಮ ತಾಲೂಕಿನ ಜನ ಪ್ರಬುದ್ಧರಾಗಿದ್ದು ತಿಳಿದು ಹೆಜ್ಜೆ ಇಡುತ್ತಾರೆ. ಇಂಥ ತಾಲೂಕಿ‌ನಲ್ಲಿ ಹೊರಗಿನವರು ಬಂದು ಆಡಳಿತ ಕನಸ್ಸು ಕಟ್ಟಿದ್ದರೆ ಅದನ್ನ ತಲೆಯಿಂದ ತೆಗೆಯಿರಿ ಎಂದು ವಿರೋಧಿಗಳಿಗೆ ಎಚ್ಚರಿಕೆ‌ ನೀಡಿದರು.

ಹುಕ್ಕೇರಿ ತಾಲೂಕಿಗೆ ಹೊರಗಿನವರು ಬರದಂತೆ ನಾನು, ನಿಖೀಲ ಕತ್ತಿ, ಪೃಥ್ವಿ ಕತ್ತಿ, ಪವನ ಕತ್ತಿ ನಾಲ್ಕು ದಿಕ್ಕಿನಲ್ಲಿ ನಿಂತು ಯಾರು ಬರದಂತೆ ನೋಡಿಕೊಳ್ಳುತ್ತೇವೆ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದರು.‌

ಅಪ್ಪಣಗೌಡ ಪಾಟೀಲ, ಬಸಗೌಡ ಪಾಟೀಲ, ಮಲ್ಲಾರಿಗೌಡ ಪಾಟೀಲ, ಉಮೇಶ ಕತ್ತಿ ತತ್ವ ಆದರ್ಶಗಳು ಇದ್ದರೆ ಮಾತ್ರ ತಳದಲ್ಲಿ ಗಟ್ಟಿ ಇರಲು ಸಾಧ್ಯ. ಎಲ್ಲ ಸಮಾಜಗಳು ಒಂದಾಗಿ ಚುನಾವಣೆಯನ್ನ ಎದುರಿಸೋಣ ಎಂದು ರಮೇಶ ಕತ್ತಿ ಕಾರ್ಯಕರ್ತರಿಗೆ ಕರೆ ನೀಡಿದರು.

ಸಹಕಾರಿ ಕ್ಷೇತ್ರದಲ್ಲಿ ಕೇಲವರು ನಮಗೆ ದ್ರೋಹ ಎಸಗಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ. ತಾಯಿಗಿಂತ ಹೆಚ್ಚು ಪ್ರೀತಿಸಿದ್ದ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಸಾಲದಲ್ಲಿ ಸಿಲುಕಿ ಒದ್ದಾಡುತ್ತಿದೆ.

ಕಾರ್ಖಾನೆ ನಡೆಸಲು ಬೇರೆ ಕ್ಷೇತ್ರದ ಜನಪ್ರತಿನಿಧಿಗಳ ಬಾಗಿಲು ಬಡೆಯುತ್ತಿದ್ದಾರೆ ಮುಂಬರುವ ಹಂಗಾಮಿಗೆ 100 ಕೋಟಿ ರೂ. ಕಾರ್ಖಾನೆಗೆ ಹಾಕಿದರೆ ಮಾತ್ರ ಪ್ರಾರಂಭವಾಗುತ್ತಿದೆ. ಇದು ಕೂಡ ರೈತರ ಮೇಲೆ ದುಬಾರಿ ಸಾಲವಾಗುತ್ತದೆ ರೈತರು ಎಚ್ಚೆತ್ತುಕೋಳ್ಳಬೇಕು ಎಂದರು.

ಶಾಸಕ ನಿಖಿಲ ಕತ್ತಿ ಮಾತನಾಡಿ. ತಾಲೂಕಿನಲ್ಲಿ ಅನೇಕರು ಚಿಕ್ಕಪ್ಪ ರಮೇಶ್ ಕತ್ತಿ ಅವರನ್ನು ದೂರವಿಟ್ಟು ರಾಜಕಾರಣ ಮಾಡುವಂತೆ ಹೇಳಿದ್ದರು. ಸಂದರ್ಭ ಬಂದರೆ ರಾಜಕಾರಣ ಬಿಡುತ್ತೇನೆ ಹೊರತು ಚಿಕ್ಕಪ್ಪನ್ನು‌ ಬಿಟ್ಟುಕೊಡುವ ಮಾತೇ ಇಲ್ಲ. ಜನರ ಸೇವೆಗೆ ನಮ್ಮ ಕುಟುಂಬ ಇಗ್ಗಟ್ಟಿನಿಂದ ಇದ್ದು, ಬೆರೆಯುವರಿಗೆ ಅವಕಾಶ ನೀಡುವುದಿಲ್ಲ ಎಂದರು.

ವಿದ್ಯುತ್ ಸಹಕಾರಿ ಸಂಘದ ನಿಕಟಪೂರ್ವ ಅಧ್ಯಕ್ಷ ಕಲಗೌಡ ಪಾಟೀಲ, ಸಂತೋಷ ಕಮತೆ, ಬಸವರಾಜ ಗುಡಸಿ, ಬಸವರಾಜ ಕಟ್ಟಿ, ಶ್ರೀ ಶೈಲ ಮಠಪತಿ, ಎಚ್ ಎಲ್ ಪೂಜೇರಿ, ಈರಗ್ವಾಡ ಪಾಟೀಲ, ಪ್ರಕಾಶ ಮುತಾಲಿಕ ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ರಾಮಚಂದ್ರ ಜೋಶಿ ಮಾತನಾಡಿದರು.

ಈ ವೇಳೆ ಯುವ ಮುಖಂಡ ಪೃತ್ವಿ ಕತ್ತಿ. ಕೆಕೆ. ಬೆನಚಿನಮರಡಿ, ಸಂಗೀತಾ ಮಣಗುತ್ತಿ, ಅರ್ಬನ ಬ್ಯಾಂಕ ಅಧ್ಯಕ್ಷ ಪವನ ಕತ್ತಿ, ಹಿರಾಶುಗರ್ ನಿದೇರ್ಶಕ ಸುರೇಶ ಬೆಲ್ಲದ, ಬಿಡಿಸಿ ಬ್ಯಾಂಕ ನಿರ್ದೇಶಕ ಗಜಾನನ ಕೊಳ್ಳಿ, ಮುಖಂಡರಾದ ಬಸವರಾಜ ಮಟಗಾರ ಎ.ಕೆ. ಪಾಟೀಲ ರಾಯಪ್ಪಾ ಡೂಗ, ಮೀರಾಸಾಹೇಬ ಮುಲ್ತಾನಿ,

ಮಹಾವೀರ ನಿಲಜಗಿ, ಬಸವರಾಜ ಹುಂದ್ರಿ, ಪ್ರಜ್ಚಲ ನಿಲಜಗಿ,ಉದಯ ಹುಕ್ಕೇರಿ , ಸತ್ಯಪ್ಪಾ ನಾಯಿಕ. ಅಶೋಕ ಪಾಟೀಲ ಅಮರ ನೇರ್ಲಿ ಈರಣ್ಣಾ ಹೂಗಾರ, ಬಿ.ಕೆ.ಮಗೆನ್ನವರ, ಚನ್ನಪ್ಪಾ ಗಜಬರ, ರಾಜು ಮುನ್ನೋಳಿ. ಗುರುರಾಜ ಕುಲಕರ್ಣಿ ಮತ್ತಿತರರಿದ್ದರು.


Advertisement

Leave a reply

Your email address will not be published. Required fields are marked *

error: Content is protected !!