ರಾಮದುರ್ಗ : 24 ಗಂಟೆಯಲ್ಲಿ ಕಳ್ಳನ ಹೆಡೆಮುರಿ ಕಟ್ಟಿದ ಪಿಎಸ್ಐ ಸವಿತಾ
ಬೆಳಗಾವಿ : ನಂದಿಹಾಳ ಗ್ರಾಮದ ದ್ಯಾಮವ್ವ ದೇವಿ ದೇವಸ್ಥಾನಕ್ಕೆ ಸೇರಿದ್ದ ಚಿನ್ನಾಭರಣ ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ರಾಮದುರ್ಗ ಠಾಣೆ ಪಿಎಸ್ಐ ಸವಿತಾ ಮುನ್ಯಾಳ ತಂಡ ಯಶಸ್ವಿಯಾಗಿದೆ.
ಸುರೇಶ್ ಬಡಿಗೇರ (40) ಬಂಧಿತ ಆರೋಪಿ. ಬುಧವಾರ
.ತಾಲೂಕಿನ ನಂದಿಹಾಳ ಗ್ರಾಮದ ದ್ಯಾಮವ್ವ ದೇವಿ ದೇವಸ್ಥಾನಕ್ಕೆ ಸೇರಿದ್ದ 1 ಲಕ್ಷ 25 ಸಾವಿ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು.
ಈ ಕುರಿತು ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್ಐ ಸವಿತಾ ಮುನ್ಯಾಳ್ ಅವರು ಆರೋಪಿಯನ್ನು ಕೇವಲ 24 ಗಂಟೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.


