ಶಾಲಾ ಬಾಲಕಿಗೆ ಕಿರುಕುಳ ; ಮರಕ್ಕೆ ಕಟ್ಟಿ ಯುವಕರನ್ನು ಥಳಿಸಿದ ಗ್ರಾಮಸ್ಥರು, ಜಾತಿ ನಿಂದನೆ ಪ್ರತಿದೂರು ದಾಖಲು..!
ಬೆಳಗಾವಿ : ಶಾಲೆಗೆ ತೆರಳಿದ್ದ ಬಾಲಕಿಗೆ ಮೋಬೈಲ್ ನಂಬರ್ ಕೊಡುವಂತೆ ಕಾಡಿಸುತ್ತಿದ್ದ ಹಾಗೂ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಇಬ್ಬರು ಯುವಕರನ್ನು ಮರಕ್ಕೆ ಕಟ್ಟಿ ಹಲ್ಲೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ರಾಮದುರ್ಗ ತಾಲೂಕಿನ ಗೊಡಚಿ ಗ್ರಾಮದ ಶಾಲಾ ಬಾಲಕಿಗೆ ಇದೇ ಗ್ರಾಮದ ಈರಣ್ಣ ನಾಯ್ಕರ್ ಹಾಗೂ ಲಕ್ಷ್ಮಣ ಚಿಪ್ಪಲಕಟ್ಟಿ ಎಂಬ ಯುವಕರು ಪ್ರೀತಿಸುವಂತೆ ಬೆದರಿಕೆ ಹಾಕಿದ್ದಕ್ಕೆ ಮರಕ್ಕೆ ಕಟ್ಟಿ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಕಟಕೋಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಧ್ಯ ವೈರಲ್ ಆದ ವೀಡಿಯೋದಲ್ಲಿ ನಮ್ಮನ್ನು ಅಕ್ಕ, ತಂಗಿ ಎಂದು ಅವರು ಮಾತನಾಡಿಸುತ್ತಾರೆ. ಅನೇಕ ವರ್ಷಗಳಿಂದ ಅವರ ಹೊಲದಲ್ಲಿ ಕೆಲಸ ಮಾಡುತ್ತಿದ್ದೇವೆ. ಅವರಿಗೆ ಯಾಕೆ ನೀನು ಕೆಟ್ಟ ಕೆಲಸ ಮಾಡಿದೆ ಎಂದು ಯುವಕನಿಗೆ ಆತನ ತಾಯಿ ಬುದ್ದಿ ಹೇಳುತ್ತಿರುವ ಧ್ವನಿ ಕೇಳಿಬರುತ್ತದೆ.
ಸಧ್ಯ ಈ ಘಟನೆ ಜಾತಿಗಳ ನಡುವ ಜಗಳದಂತೆ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ದಲಿತರ ಮೇಲೆ ಲಿಂಗಾಯತ ಸಮುದಾಯದವರ ದಬ್ಬಾಳಿಕೆ ಎಂಬ ರೀತಿಯ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಹಾಗೂ ಹಲ್ಲೆ ದೂರು ದಾಖಲಿಸಲಾಗಿದೆ.
ಹಲ್ಲೆಗೊಳಗಾದ ಯುವಕರು ನೀಡಿರುವ ದೂರಿನ ಅನ್ವಯ ಜಮೀನಿಗೆ ಹೋಗುವ ದಾರಿ ವಿಷಯದಲ್ಲಿ ನಮ್ಮ ಮೇಲೆ ಹಲ್ಲೆ ಮಾಡಲಾಗಿದೆ. ಕೀಳು ಪದಬಳಕೆ ಮಾಡಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ವಿಠ್ಠಲ ನಾಯ್ಕರ್ ಎಂಬಾತ ದೂರು ದಾಖಲಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು, ಪ್ರತಿದೂರು ದಾಖಲಾಗಿದೆ. ಲಿಂಗಾಯತ ಸಮುದಾಯದ ಈರಣ್ಣ ಪಾನಕಟ್ಟಿ, ಬಸಗೌಡ ಪಾಟೀಲ್, ಪ್ರದೀಪ ಪಾನಕಟ್ಟಿ, ಮಹಾಂತೇಶ್ ಪಾನಕಟ್ಟಿ, ಸಚಿನ್ ಪಾನಕಟ್ಟಿ, ನಿಂಗರಾಜ ಪಾನಕಟ್ಟಿ, ಸಂಗಪ್ಪ ಪಾನಕಟ್ಟಿ ವಿರುದ್ಧ ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



