Video – ಸುಸೈಡ್ ಮಾಡ್ಕೊಳ್ತೆನೆ ಅಂದ್ರು ಅನುದಾನ ಸಿಕ್ತಿಲ್ಲ ; ರಾಜೀನಾಮೆಗೆ ಮುಂದಾದ ಕಾಂಗ್ರೆಸ್ ಶಾಸಕ ಕಾಗೆ..?
ಕಾಗವಾಡ : ಬೇಕಾದರ ಬರ್ಕೊರಿ, ಆಡಳಿತ ಪಕ್ಷದಲ್ಲಿ ಇದ್ದರು ನಮ್ಮ ಕೆಲಸ ಆಗ್ತಿಲ್ಲ. ಬೇಕಾದರೆ ರಾಜೀನಾಮೆ ಕೊಡ್ತೆನೆ. ಇಂತ ರಾಜಕಾರಣ ಮಾಡಲ್ಲ. ತಮ್ಮದೇ ಶೈಲಿಯಲ್ಲಿ ಕಾಗವಾಡ ಶಾಸಕ ರಾಜು ಕಾಗೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಆಡಳಿತ ಪಕ್ಷದಲ್ಲಿ ಇದ್ದರು ನಮ್ಮ ಮನವಿಗೆ ಸ್ಪಂದನೆ ಸಿಗುತ್ತಿಲ್ಲ. ಈಗಾಗಲೇ ನಾನು ವಿಧಾನಸೌಧದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆಯನ್ನು ಸಚಿವರಿಗೆ ಕೊಟ್ಟಿದ್ದಾಗಿ ಕಾಗವಾಡ ಶಾಸಕ ರಾಜು ಕಾಗೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿರುವ ಇವರು. ನಮ್ಮಲ್ಲಿ ಎಷ್ಟು ಸಂಪತ್ತು ಇದೆ ಎಂಬುದು ಮುಖ್ಯವಲ್ಲ. ಮೊದಲು ರೈತರನ್ನು ಬದುಕಿಸುವ ಕೆಲಸ ಆಗಬೇಕು. ನಿಮ್ಮ ನೋವುಗಳನ್ನು ನಾವು ಮೇಲೆ ತಲುಪಿಸುವ ಕೆಲಸ ಮಾಡುತ್ತಿದ್ದು ಈ ಸರ್ಕಾರದಲ್ಲಿ ಸ್ಪಂದನೆ ಸಿಗುತ್ತಿಲ್ಲ. ರಾಜೀನಾಮೆ ಕೊಟ್ಟು ಹೊರಬರಲು ಹಿಂದೆಮುಂದೆ ನೋಡಲ್ಲ ಎಂದರು.
ಜನರಿಗೆ ಕೊಟ್ಟ ಭರವಸೆ ಈಡೇರಿಸುವುದೇ ನನಗೆ ತುಂಬಾ ಮುಖ್ಯ. ಆದರೆ ಕಾಣದ ಕೈಗಳು ಹಿಂದೆ ಕೆಲಸಕ್ಕೆ ಅಡ್ಡಿ ಮಾಡುತ್ತಿವೆ ಎಂಬ ಅನುಮಾನ ಮೂಡಿದೆ. ಸರ್ಕಾರ ನಮಗೆ ಸ್ಪಂದನೆ ಮಾಡುತ್ತಿಲ್ಲ. ನಾವು ಯಾವುದಕ್ಕೆ ಶಾಸಕರಾಗಿ ಇರಬೇಕು ರಾಜಿನಾಮೆ ಕೊಡುತ್ತೇನೆ ಎಂದು ಹರಿಹಾಯ್ದರು.


