ಘರ್ಜನೆಗೆ ಸಿದ್ಧಗೊಂಡ ಪಂಚಮಸಾಲಿ ಹುಲಿಗಳು ; ಸಿದ್ದು ಸರ್ಕಾರಕ್ಕೆ ನಡುಕ
ಬೆಳಗಾವಿ : ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಪಂಚಮಸಾಲಿ ಸಮುದಾಯ ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದು ಡಿಸೆಂಬರ್ 10 ರ ಸೋಮವಾರ ಬೆಳಗಾವಿ ಸುವರ್ಣ ವಿಧಾನಸೌಧ ಮುತ್ತಿಗೆ ಹಾಕಲು ಸಿದ್ಧತೆ ನಡೆಸಿದೆ.
ಬೆಳಗಾವಿ ನಗರದಲ್ಲಿ ಸುದ್ದಿಘೋಷ್ಠಿ ಉದ್ದೇಶಿಸಿ ಮಾತನಾಡಿದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು.
ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಲಕ್ಷಕ್ಕೂ ಅಧಿಕ ಪಂಚಮಸಾಲಿ ಹೋರಾಟಗಾರರು ಬೃಹತ್ ಟ್ರ್ಯಾಕ್ಟರ್ ರ್ಯಾಲಿ ಮೂಲಕ ಹೋರಾಟ ನಡೆಸಲಿದೆ ಎಂದು ಗುಡುಗಿದ್ದಾರೆ.
ಐದು ಸಾವಿರಕ್ಕೂ ಅಧಿಕ ಟ್ರ್ಯಾಕ್ಟರ್ ಹಾಗೂ ವಕೀಲರು ಪ್ರತಿಭಟನೆಯಲ್ಲಿ ಹಾಜರಿರಲಿದ್ದು, ಈ ಬಾರಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡಬೇಕು ಎಂದು ಆಗ್ರಹ ಮುಂದಿಟ್ಟಿದ್ದಾರೆ. ಈವರೆಗೂ ಸರ್ಕಾರ ನಮ್ಮ ಕೂಗಿಗೆ ಬೆಲೆ ನೀಡಿಲ್ಲ. ಎಲ್ಲರೂ ಹೋರಾಟಕ್ಕೆ ಸಿದ್ಧರಾಗಿ ಎಂದು ಸ್ವಾಮೀಜಿ ಕರೆ ನೀಡಿದ್ದಾರೆ.


