ಅಮಾಯಕ ಜನರನ್ನು ಕಾಪಾಡಿ ; ಲೈವ್ ನಲ್ಲಿ ಪಾಕ್ ಪತ್ರಕರ್ತೆ ಕಣ್ಣೀರು
ಪಾಕಿಸ್ತಾನ : ಇಷ್ಟು ದಿನ ತನ್ನ ಕಳ್ಳಾಟದ ಮೂಲಕ ಜಗತ್ತಿನೆದರುರು ನಾಟಕ ಮಾಡುತ್ತಿದ್ದ ಪಾಕಿಸ್ತಾನವನ್ನು ಬೆತ್ತಲೆಗೊಳಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಅವರದೇ ದೇಶಕ್ಕೆ ಹೊಕ್ಕು ಉಗ್ರರನ್ನು ಹೊಡೆದುರುಳಿಸಿದೆ.
ಈ ನಡುವೆ ಭಾರತದ ದಾಳಿಕೆ ತತ್ತರಿಸಿದ ಪಾಕಿಸ್ತಾನ ಅರಚಾಡುತ್ತಿದೆ. ಸಧ್ಯ ಅಲ್ಲಿನ ಪತ್ರಕರ್ತೆ, ಲೈವ್ ನಲ್ಲಿ ಕಣ್ಣೀರು ಹಾಕಿದ್ದು ಅಮಾಯಕರನ್ನು ರಕ್ಷಣೆ ಮಾಡುವಂತೆ ಕಣ್ಣೀರು ಹಾಕಿರುವ ವೀಡಿಯೋ ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆಪರೇಷನ್ ಸಿಂಧೂರ್ ಹೆಸರಲ್ಲಿ ಭಾರತೀಯ ಸೇನೆ ದಾಳಿ ಪ್ರಾರಂಭಿಸಿದ್ದು ಮಧ್ಯರಾತ್ರಿ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತ ದಾಳಿ ನಡೆಸಿದೆ.
ಪಾಕಿಸ್ತಾನದ 9 ಉಗ್ರರ ನೆಲೆಗಳ ಮೇಲೆ ಭಾರತ ದಾಳಿ ಮಾಡಿದ್ದು ಈ ದಾಳಿಯಲ್ಲಿ 100ಕ್ಕೂ ಅಧಿಕ ಉಗ್ರರು ಸಾವಣಪ್ಪಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಭಾರತದ ನಿಖರ ದಾಳಿಗೆ ತತ್ತರಿಸಿ ಹೋಗಿರುವ ಪಾಕಿಸ್ತಾನ ಗಡಿಯಲ್ಲಿ ಗುಂಡಿನ ದಾಳಿ ನಡೆಸಿದೆ. ಭಾರತೀಯ ಸೇನೆ ಪ್ರತ್ಯುತ್ತರ ನೀಡಲು ಸಿದ್ಧವಾಗಿದ್ದು, ಸೇನೆಯ ಜೊತೆ ದೇಶದ ಜನ ನಿಂತಿದ್ದಾರೆ.


