Select Page

Advertisement

ಬೆಳಗಾವಿ : ಭೀಕರ ರಸ್ತೆ ಅಪಘಾತ ; ಓರ್ವ ಸಾವು

ಬೆಳಗಾವಿ : ಭೀಕರ ರಸ್ತೆ ಅಪಘಾತ ; ಓರ್ವ ಸಾವು

ಬೆಳಗಾವಿ : ಜಿಲ್ಲೆಯ ನಿಪ್ಪಾಣಿ ಬಳಿ ಸರಣಿ ಅಪಘಾತ ಸಂಭವಿಸಿದ್ದು ಓರ್ವ ವ್ಯಕ್ತಿ ಸಾವಣಪ್ಪಿರುವ ಘಟನೆ ನಡೆದಿ.

ನಿಪ್ಪಾಣಿ ಹೊರವಲಯದ ಸ್ತವನಿಧಿ ಘಾಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ಖಾನಾಪುರ ತಾಲೂಕು ಜಾಂಬೋಟಿ ಗ್ರಾಮದ ನಾರಾಯಣ ಪಾರವಾಳಕರ (65) ಮೃತಪಟ್ಟಿದ್ದಾರೆ.

ಕ್ರೂಸರ್ ವಾಹನದಲ್ಲಿ ದೇವರ ದರ್ಶನ ಪಡೆದು ವಾಪಸ್ ಬರುವ ಸಂದರ್ಭದಲ್ಲಿ ಘಟನೆ ಸಂಭವಿಸಿದೆ. ತಮಿಳುನಾಡಿನಿಂದ ಮುಂಬೈಗೆ ಹೊರಟಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ಗೆ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಜಾಂಬೋಟಿಯ ರೇಷ್ಮಾ ಹಾಗೂ ಶಂಕರ ಪಾರವಾಳಕರ ಗಂಭೀರವಾಗಿ ಗಾಯಗೊಂಡಿದ್ದು, ವೈದ್ಯಕೀಯ ಚಿಕಿತ್ಸೆಗಾಗಿ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನಿಸಿದ್ದು 15 ಜನರಿಗೆ ಸಣ್ಣ, ಪುಟ್ಟ ಗಾಯಗಳಾಗಿವೆ. ನಿಪ್ಪಾಣಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

Advertisement

Leave a reply

Your email address will not be published. Required fields are marked *

error: Content is protected !!