Video – ರೆಸಾರ್ಟ್ ನಿಂದ ಬಂದು ಮತದಾನ ಮಾಡಿದ ಪಂಚಾಯತಿ ಸದಸ್ಯರು ; 50 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ
ಬೆಳಗಾವಿ : ಎರಡೂ ರಾಜಕೀಯ ನಾಯಕರ ಬಣದ ಪ್ರತಿಷ್ಠೆಯ ಕಣವಾದ ಬೆಳಗಾವಿ ತಾಲೂಕಿನ ನಿಲಜಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಯುತ್ತಿದ್ದು, ನಿಲಜಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿದೆ.
ನಿಲಜಿ ಗ್ರಾಪಂ ಚುನಾವಣೆಯ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಸದಸ್ಯರನ್ನು ಅಪರಣ ಮಾಡಿಕೊಂಡು ಹೋಗಿದ್ದಾರೆ ಎನ್ನುವ ಊಹಾಪೋಹಳು ನಿಲಜಿಯಲ್ಲಿ ಜೋರಾಗಿ ಎದಿದ್ದವು. ಗ್ರಾಪಂ ಚುನಾವಣಾ ಅಧಿಕಾರಿ ಇಂದು ನಿಲಜಿ ಗ್ರಾಮದ ಚುನಾವಣೆ ನಡೆಸಲು ತೀರ್ಮಾನಿಸಿದರು.
ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಎಸಿಪಿ ನಾರಾಯಣ ಬರಮನಿ ನೇತೃತ್ವದಲ್ಲಿ ಸುಮಾರು 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ಕೆಎಸ್ ಆರ್ ಪಿ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ.
ನಿಲಜಿ ಗ್ರಾಪಂ ಚುನಾವಣೆ ಕಣ ರಂಗೇರಿದ್ದು ಎರಡೂ ಬಣಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ನಿಲಜಿ ಗ್ರಾಮ ಪಂಚಾಯತಿ ಸದಸ್ಯರನ್ನು ರೆಸಾರ್ಟ್ ಗೆ ಕರೆದುಕೊಂಡು ಹೋಗಿ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಯ ಚುನಾವಣೆಗೆ ಖಾಸಗಿ ವಾಹನಗಳಲ್ಲಿ ಕರೆ ತಂದಾಗ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಪೊಲೀಸರ ಬಂದೋಬಸ್ತನಲ್ಲಿ ಗ್ರಾಪಂ ಸದಸ್ಯರು ಗ್ರಾಪಂ ಕಚೇರಿಗೆ ಹೋಗಿ ಮತದಾನ ಮಾಡಿದರು.


