
ಮತ್ತೆ ಬೆಳಗಾವಿಗೆ ಬರ್ತಿದ್ದಾಳೆ ಹನಿಟ್ರ್ಯಾಪ್ ಬೆಡಗಿ

ಬೆಳಗಾವಿ : ಚನ್ನಪಟ್ಟಣದ ಕಾಂಗ್ರೆಸ್ ನ ಯವ ನಾಯಕಿ, ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ್ ವಿಡಿಯೋದಲ್ಲಿದ್ದ ನವ್ಯಶ್ರೀ ರಾವ್ ಮಂಗಳವಾರ ಬೆಳಗಾವಿಗೆ ಬಂದು ಕಮಿಷನರ್ ಗೆ ಭೇಟಿಯಾಗುವುದಾಗಿ ಹೇಳಿ ಬೆಂಗಳೂರಿಗೆ ತೆರಳಿದ್ದ ನವ್ಯಶ್ರೀ ಗುರುವಾರ ಸಂಜೆ ಬೆಳಗಾವಿಗೆ ಆಗಮಿಸಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಿದ್ದಾಳೆ.
ಬೆಂಗಳೂರಿನಲ್ಲಿ ತೆರಳಿ ಖಾಸಗಿ ಮಾಧ್ಯಮಕ್ಕೆ ಎರಡೂ ದಿನಗಳಿಂದ ರಾಜಕುಮಾರ ಟಾಕಳೆ ವಿರುದ್ಧ ಆರೋಪ ಮಾಡುತ್ತಿರುವ ನವ್ಯಶ್ರೀ ಇಲ್ಲಿಯವರೆಗೂ ಅನ್ಯಾಯವಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿಲ್ಲ.
ತೋಟಗಾರಿಕೆ ಇಲಾಖೆಯ ಅಧಿಕಾರಿ ರಾಜಕುಮಾರ ಟಾಕಳೆ ಮಾಜಿ ಸಚಿವರ ಆಪ್ತ ಕಾರ್ಯದರ್ಶಿ ಇದ್ದ ವೇಳೆ ಭ್ರಷ್ಟಾಚಾರ ನಡೆಸಿದ ಕಾರಣ ಅವರನ್ನು ಕೆಲಸದಿಂದ ವಜಾ ಮಾಡಿದ್ದರು ಎಂದು ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೆ ನೀಡಿರುವ ನವ್ಯಶ್ರೀ, ಈಕೆ ನೀಡಿರುವ ಹೇಳಿಕೆಯಂತೆ ರಾಜಕುಮಾರ ಭ್ರಷ್ಟಾಚಾರ ನಡೆಸಿದ್ದರೇ, ನವ್ಯಶ್ರೀಯಿಂದ 5 ಲಕ್ಷ ರೂ. ಸಾಲ ಪಡೆಯುತ್ತಿದ್ದರಾ ಎನ್ನುವ ಪ್ರಶ್ನೆ ಎಲ್ಲರಲ್ಲಿ ಕಾಡುತ್ತಿದೆ. ಇದಕ್ಕೆ ನವ್ಯಶ್ರೀಯೇ ಸ್ಪಷ್ಟನೆ ನೀಡಬೇಕಿದೆ.
ರಾಜಕುಮಾರ ಟಾಕಳೆ, ನವ್ಯಶ್ರೀ ಮದುವೆಯಾದ ದಿನಾಂಕ ಆಕೆಗೆ ಗೊತ್ತಿಲ್ಲ. ಭೇಟಿಯಾದ ದಿನವನ್ನೆ ಸಂಭ್ರಮಾಚರಣೆ ಮಾಡುತ್ತೇವೆ ಎಂದು ಖಾಸಗಿ ಮಾಧ್ಯಮಕ್ಕೆ ಹೇಳಿಕೆ ನೀಡಿರುವ ನವ್ಯಶ್ರೀ ಮೇಲೆ ನಾನಾ ಅನುಮಾನ ಕಾಡುತ್ತಿವೆ. ಮದುವೆಯಾದ ಯಾವ ದಂಪತಿಗಳು ಮದುವೆಯಾ್ ದಿನವನ್ನು ಮರೆಯುವುದಿಲ್ಲ. ರಾಜಕುಮಾರ ನನ್ನ ಗಂಡ ಎಂದು ಹೇಳಿ ಬೆಳಗಾವಿಯಿಂದ ನಾಪತ್ತೆಯಾಗಿದ್ದ ಹನಿಟ್ರ್ಯಾಪ್ ರಾಣಿ ಇಂದು ಸಂಜೆ ಬೆಳಗಾವಿಗೆ ಮತ್ತೆ ಆಗಮಿಸಿ ಪೊಲೀಸರಿಗೆ ಯಾವ ಸಾಕ್ಷಿ ನೀಡುತ್ತಾಳೆ ಎನ್ನುವುದು ಕುತೂಹಲವಾಗಿದೆ.