ಕುಂದಾನಗರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
ಬೆಳಗಾವಿ : ದೇಶದ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನಲೆ ಕುಂದಾನಗರಿ ಬೆಳಗಾವಿ ಸಿಂಗಾರಗೊಂಡಿದ್ದು, ಮಧ್ಯಾಹ್ನ 2:30 ಕ್ಕೆ ಪ್ರಧಾನಿ ಮೋದಿ ಬೆಳಗಾವಿ ಸಾಮ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರನ್ನು ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಎಂ.ಜಿ ಹಿರೇಮಠ ಸೇರಿದಂತೆ ಅನೇಕರು ಸ್ವಾಗತಿಸಿದರು.
ನಗರದ ಕೆಎಸ್ಆರ್ ಪಿ ಕ್ರೀಡಾಂಗಣಕ್ಕೆ ಆಗಮಿಸಲಿದ್ದು ನಂತರ ಚನ್ನಮ್ಮ ವೃತ್ತ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಸಂಚರಿಸಿ ನಂತರ ಮಾಲಿನಿ ಸಿಟಿ ವೇದಿಕೆಗೆ ಬರಲಿದ್ದಾರೆ.