ತಾಯಿಯ ಚಿತ್ರ ನೋಡುತ್ತಲೇ ಪ್ರಧಾನಿ ಮಂದಸ್ಮಿತ
ಬೆಳಗಾವಿ : ಭಾನುವಾರದ ಪ್ರಧಾನಿ ನರೇಂದ್ರ ಮೋದಿಯವರ ಸಮಾವೇಶ ಕೆಲವು ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾಯ್ತು. ತಾಯಿಯ ಮುಖ ನೋಡುತ್ತಲೇ ಪ್ರಧಾನಿ ನರೇಂದ್ರ ಮೋದಿಯವರ ಕಣ್ಣಲ್ಲಿ ಅದೊಂದು ಸಡಗರದ ಕ್ಷಣ.
ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಲಾವಿದನ ಕುಂಚದಲ್ಲಿ ಅರಳಿದ್ದ ಮೋದಿ ಹಾಗೂ ಅವರ ತಾಯಿ ಹೀರಾಬೆನ್ ಅವರ ಸುಂದರ ಭಾವಚಿತ್ರ ನೋಡಿ ಮೋದಿ ಭಾವುಕರಾದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮೋದಿಗೆ ಚಿತ್ರ ನೀಡಿದರು. ಈ ಸಂದರ್ಭದಲ್ಲಿ ಕೆಲ ಕ್ಷಣ ಮೋದಿ ಭಾವಚಿತ್ರ ಗಮನಿಸಿ ಕಲಾವಿದನಿಗೆ ಧನ್ಯವಾದ ತಿಳಿಸಿದರು.
ನಗರ ಬಿಜೆಪಿ ಘಟಕದ ವತಿಯಿಂದ ನಡೆದ ಸನ್ಮಾನದಲ್ಲಿ ಪ್ರಧಾನಿ ಮೋದಿಗೆ ಶಾಲು ಹೊದಿಸಿ ಕೇಸರಿ ಪೇಟ ತೊಡಿಸಲಾಯಿತು. ಜೊಡೆತ್ತಿನ ಬಂಡಿ ಆಕೃತಿ ನೀಡಿ ಬಿಜೆಪಿ ಅಭ್ಯರ್ಥಿಗಳಾದ ಜಗದೀಶ್ ಶೆಟ್ಟರ್ ಹಾಗೂ ಅಣ್ಣಾಸಾಹೇಬ್ ಜೊಲ್ಲೆ ಶುಭಹಾರೈಸಿದರು.


