ಬೆಂಗಳೂರು : ನಮ್ಮ ಮೆಟ್ರೋದಲ್ಲಿ ಯುವ ಜೋಡಿ ಮೈ ಮರೆತು ಅಸಭ್ಯ ವರ್ತನೆ ತೋರಿರುವುದು ಬೆಳಕಿಗೆ ಬಂದಿದ್ದು, ಇದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಚಲಿಸುವ ಮೆಟ್ರೋದಲ್ಲಿ ಕುಳಿತಿದ್ದ ಯುವಕ ಮತ್ತು ಯುವತಿ ಸಹ ಪ್ರಯಾಣಿಕರನ್ನು ಲೆಕ್ಕಿಸದೆ ಕಿಸ್ ಮಾಡಿದ್ದಾರೆ. ಪರಸ್ಪರ ತಬ್ಬಿಕೊಂಡು ಅಶ್ಲೀಲವಾಗಿ ವರ್ತನೆ ಮಾಡಿರುವ ವೀಡಿಯೋ ಸೆರೆಯಾಗಿದೆ.
ಸಾರ್ವಜನಿಕ ಸ್ಥಳದಲ್ಲಿ ಅದೂ ಮೆಟ್ರೋ ದಂದಹ ಜನ ಓಡಾಡುವ ಜಾಗದಲ್ಲಿ ಯುವ ಜೋಡಿ ಈ ರೀತಿ ಮೈ ಮರೆತಿದ್ದು ಎಲ್ಲೆಡೆ ಆಕ್ರೋಶ ವ್ಯಕ್ತವಾಗುವಂತೆ ಮಾಡಿದೆ.
ಸಧ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ರೀತಿ ಅಶ್ಲೀಲವಾಗಿ ವರ್ತಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹವೂ ವ್ಯಕ್ತವಾಗಿದೆ.


