ನವಿಲು ಗರಿ ಇಟ್ಟುಕೊಂಡ ದರ್ಗಾಗಳ ಮೇಲೆ ರೇಡ್ ಮಾಡಿ : ಶಾಸಕ ಬೆಲ್ಲದ್
ಬೆಂಗಳೂರು : ಕೇವಲ ಹುಲಿ ಉಗುರು ಪೆಂಡೆಂಟ್ ವಿಚಾರ ಮುಂದಿಟ್ಟು ಸರ್ಕಾರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಕೇವಲ ಹುಲಿ ಉಗುರು ಅಲ್ಲ ನವಿಲು ಗರಿ ಇಟ್ಟುಕೊಂಡ ದರ್ಗಾಗಳ ಮೇಲೆ ರೇಡ್ ಮಾಡಿ ಎಂದು ಶಾಸಕ ಅರವಿಂದ ಬೆಲ್ಲದ್ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.
ಹುಲಿ ಉಗುರು ಧರಿಸಿದ್ದ ವಿಚಾರವಾಗಿ ಸಧ್ಯ ರಾಜ್ಯಾದ್ಯಂತ ಸುದ್ದಿ ನಡೆಯುತ್ತಿದ್ದು. ಈ ವಿಚಾರವಾಗಿ ಮಾತನಾಡಿದ ಶಾಸಕ ಅರವಿಂದ ಬೆಲ್ಲದ್ ಅವರು.
ರಾಜ್ಯದಲ್ಲಿ ಬರ ಸಮಸ್ಯೆ ಇದೆ ಈ ವಿಚಾರ ಬೆರೆಡೆ ಸೆಳೆಯಲು ಸರ್ಕಾರ ಹುಲಿ ಉಗುರು ವಿಚಾರ ಮುನ್ನೆಲೆಗೆ ತಂದಿದ್ದು ಹಿಂದೂಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಬರಗಾಲ ಇದೆ, ಇದರಿಂದ ಜನರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಜನರಿಗೆ ಈ ಕುರಿತು ಸಹಾಯ ಮಾಡದ ಸರ್ಕಾರ ಹುಲಿ ಉಗುರು ವಿಚಾರ ಮುನ್ನೆಲೆಗೆ ತಂದು ಹಿಂದುಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದರು.