ಪಿಎಸ್ಐ ಮಗನ ಪುಂಡಾಟಕ್ಕೆ ವೃದ್ಧ ಬಲಿ
ಮೈಸೂರು : ಪಿಎಸ್ಐ ಅಧಿಕಾರಿ ಒಬ್ಬರ ಪುತ್ರ ವ್ಹೀಲಿಂಗ್ ಪುಂಡಾಟಕ್ಕೆ ವೃದ್ಧನೋರ್ವ ಬಲಿಯಾದ ಘಟನೆ ನಂಜನಗೂಡು ( Najangudu ) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಕರಣದಲ್ಲಿ ಬಂದಿತ ಆರೋಪಿ ಮಹಿಳಾ ಪಿಎಸ್ಐ ಪುತ್ರ ಸೈತದ್ ಇಮಾನ್ ಎಂದು ತಿಳಿದುಬಂದಿದೆ. ಆರೋಪಿತ ರಸ್ತೆ ಮಧ್ಯೆ ಬೈಕ್ ಮೇಲಿಂದ ವ್ಹೀಲಿಂಗ್ ಮಾಡುವ ಸಂದರ್ಭದಲ್ಲಿ ಗುರುಸ್ವಾಮಿ ಎಂಬುವ ಪಾದಚಾರಿಗೆ ಗುದ್ದಿದೆ. ಇದರಿಂದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದರು.
ಗಾಯಗೊಂಡಿದ್ದ ಆರೋಪಿ ಸೈಯದ್ ಇಮಾನ್ ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ಬಂಧಿಸಿದ್ದಾರೆ.
ಪಿಎಸ್ಐ ಯಾಸ್ಮಿನ್ ತಾಜ್ ಅವರ ಪುತ್ರ ಸೈಯದ್ ಈ ಹಿಂದೆಯೂ ಅಪಾಯಕಾರಿ ಬೈಕ್ ರೈಡ್ ಮಾಡುತ್ತಿದ್ದ ಈ ಕುರಿತು ಪೊಲೀಸರು ದಂಡ ವಿಧಿಸಿದ್ದರಂತೆ. ಸಧ್ಯ ಮೃತ ವ್ಯಕ್ತಿ ಕಡೆಯವರು ಪ್ರಕರಣ ದಾಖಲಿಸಿದ್ದರ ಹಿನ್ನಲೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.



