ಜೊಲ್ಲೆ ಸೊಕ್ಕಿನಿಂದ ಚಿಕ್ಕೋಡಿಯಲ್ಲಿ ಬಿಜೆಪಿ ಸೋಲು : ಮುತಾಲಿಕ್ ವಾಗ್ದಾಳಿ
ಬೆಳಗಾವಿ : ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಸೋಲು ಆಗಿಲ್ಲ. ಅಲ್ಲಿ ಅಣ್ಣಾಸಾಹೇಬ ಜೊಲ್ಲೆಯ ಸೊಕ್ಕು, ಅಹಂಕಾರದ ಸೋಲಾಗಿದೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ ಹೇಳಿದರು.
ಶನಿವಾರ ಬೆಳಗಾವಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದರು. ಚಿಕ್ಕೋಡಿಯಲ್ಲಿ ಸೋಲು ಕಂಡಿದ್ದು ಅಣ್ಣಾ ಸಾಹೇಬ ಜೊಲ್ಲೆ ಮಾತ್ರ. ಹಿಂದೂಗಳು, ಬಿಜೆಪಿ ಕಾರ್ಯಕರ್ತರು ಸೋತಿಲ್ಲ. ಯಾವುದೇ ರೀತಿಯ ಕಾರ್ಯಕರ್ತರ ಜೊತೆಗೆ ಸಂಪರ್ಕ ಇಲ್ಲದ ವ್ಯಕ್ತಿ.
ಕ್ಷೇತ್ರದದಲ್ಲಿ ಏನೇನೂ ಕೆಲಸ ಮಾಡದ ವ್ಯಕ್ತಿ ಅಣ್ಣಾಸಾಹೇಬ ಜೊಲ್ಲೆ. ಕೇವಲ ಬ್ಯಾಂಕ್, ಜಮೀನು, ಪೆಟ್ರೋಲ್ ಬಂಕ್ ಗಳನ್ನು ಬೆಳೆಸಿದರೂ ವಿನಃ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಬಿಜೆಪಿ ಸೋತ್ತಿಲ್ಲ. ಮುಂದಿನ ಬಾರಿ ಶಕ್ತಿ ಮೀರಿ ಗೆಲುವು ಸಾಧಿಸಲಿದೆ ಎಂದರು.